+91 6363027736

jnanajyothiyogakendra@gmail.com

Image

ಸಂಸ್ಥೆಯ ಸಂಸ್ಥಾಪಕರು

ಯೋಗಾಚಾರ್ಯ ಶ್ರೀಯುತ ಸತೀಶ್ ಜೀ

ಮೂಲತಃ ಭದ್ರಾವತಿಯವರಾದ ಶ್ರೀಯುತ ಸತೀಶ್ ಜೀ ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ಆರೋಗ್ಯದ ಸಮಸ್ಯೆಯ ಕಾರಣ ಯೋಗ ಕ್ಲಾಸ್ ಗೆ ಸೇರಿ ಅದರಿಂದ ತಮ್ಮ ಆರೋಗ್ಯದಲ್ಲಿ ಉತ್ತಮ ಬದಲಾವಣೆ ಆಗಿದ್ದರಿಂದ ಈ ಯೋಗಪದ್ಧತಿಯ ಮಹತ್ವವನ್ನು ಮನಗಂಡು ಹಾಗೂ ಅಲ್ಲಿ ನೀಡಿದ ಅಮೂಲ್ಯ ಜ್ಞಾನದ ಮಹತ್ವವನ್ನು ಅರಿತು ತಮಗಷ್ಟೇ ಅಲ್ಲದೇ ಸಮಾಜದ ಪ್ರತಿಯೊಬ್ಬರಿಗೂ ಇದು ಸಿಗಬೇಕೆಂಬ ದೃಷ್ಟಿಯಿಂದ ಪೂಜ್ಯ ಋಷಿ ಪ್ರಭಾಕರ್ ಗುರೂಜಿಯವರಿಂದ ತರಬೇತಿಯನ್ನು ಪಡೆದು ಈಗ ಸುಮಾರು 25,000 ಕ್ಕೂ ಆಧಿಕ ಜನರಿಗೆ ಈ ಜ್ಞಾನವು ತಲುಪಲು ಕಾರಣೀಕರ್ತರಾಗಿರುತ್ತಾರೆ.

ಹಾಗೆಯೇ ಸಮಾಜದಲ್ಲಿ ಇನ್ನೂ ಅಧಿಕ ಜನರಿಗೆ ಈ ಜ್ಞಾನವನ್ನು ತಲುಪಿಸುವ ಉದ್ದೇಶದಿಂದ ೨೦೧೭ರಲ್ಲಿ “ಜ್ಞಾನಜ್ಯೋತಿ ಯೋಗಕೇಂದ್ರ, ಶೃಂಗೇರಿ” ಸಂಸ್ಥೆಯನ್ನು ಸ್ಥಾಪಿಸಿ ಇದರ ಮೂಲಕ ಯೋಗ ತರಬೇತಿ ಕಾರ್ಯಕ್ರಮಗಳು, ಆಧ್ಯಾತ್ಮಿಕ, ಸಾಂಸ್ಕೃತಿಕ ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿರುತ್ತಾರೆ. ಸದಾ ಸಮಾಜಕ್ಕೆ ಒಳ್ಳೆಯದನ್ನು ನೀಡಬೇಕೆಂಬ ಇವರ ಉದ್ದೇಶಕ್ಕೆ ಸಾಕ್ಷಿಯೇ ಈ ಜ್ಞಾನಜ್ಯೋತಿ ಯೋಗಕೇಂದ್ರ (ಕುಂಚೇಬೈಲಿನ ಧ್ಯಾನಮಂದಿರ).

ಹಾಗೂ ಜನರಿಗೆ ಆಯಾ ಸಮಯಕ್ಕೆ ಯಾವ ರೀತಿಯ ಜ್ಞಾನದ ಅವಶ್ಯಕತೆ ಇದೆಯೋ ಅದಕ್ಕೆ ತಕ್ಕಂತೆ ಕೋರ್ಸ್ಗಳನ್ನು ಸೃಷ್ಟಿಸಿ ಅವರಿಗೆ ಆ ಜ್ಞಾನ ತಲುಪುವಂತೆ ಮಾಡುವಲ್ಲಿ ಸಂಪೂರ್ಣ ಯಶಸ್ವಿಯಾಗಿರುತ್ತಾರೆ. ಅದಕ್ಕೆ ಸತ್ಯವ್ರತ, ಧರ್ಮ ಹಾಗೂ ಆನ್‌ಲೈನ್ ಕೋರ್ಸ್ಗಳು ಸಾಕ್ಷಿಯಾಗಿವೆ. ಒಟ್ಟಿನಲ್ಲಿ ಯಾವ ಮೂಲಕವಾದರೂ ಜ್ಞಾನವನ್ನು ಜನರಿಗೆ ತಲುಪಿಸಬೇಕೆಂಬುದು ಇವರ ಮೂಲ ಉದ್ದೇಶವಾಗಿದೆ.

  • ಇವರು ಧಾರವಾಢ ವಿಶ್ವವಿದ್ಯಾಲಯದಿಂದ "YOGA CERTIFICATION" ಪಡೆದಿರುತ್ತಾರೆ ಮತ್ತು YIC(YOGA INSTRUCTOR COURSE)ನಲ್ಲಿ 360 Hour Training ಪಡೆದಿರುತ್ತಾರೆ.
  • ಪ್ರಾಣಚೈತನ್ಯ ಚಿಕಿತ್ಸಕರು (Pranic Healing)
  • ಆಪ್ತ ಸಮಾಲೋಚಕರು
  • ಅನೇಕ ಸಮಾಜಸೇವಾ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ.
  • ಫೋಟೋಗ್ರಫಿ

ಪ್ರಮಾಣ ಪತ್ರಗಳು

certificate
certificate
certificate
certificate
certificate
certificate
certificate
certificate

ಸಂಸ್ಥೆಯ ಉದ್ದೇಶ

ಆರೋಗ್ಯವಂತ, ಆನಂದಮಯ ಸಮಾಜದ ಪರಿಕಲ್ಪನೆಯಲ್ಲಿ ಸೃಷ್ಟಿಯಾದ ಈ ಸಂಸ್ಥೆಯ ಮೂಲ ಉದ್ದೇಶವೇ ಸಮಾಜದಲ್ಲಿನ ಪ್ರತಿಯೊಬ್ಬರೂ ತಮ್ಮ ಆರೋಗ್ಯವನ್ನು ಉತ್ತಮಪಡಿಸಿಕೊಂಡು ಆನಂದಮಯವಾಗಿ ಜೀವನ ನಡೆಸಬೇಕೆನ್ನುವುದು.

ನಮ್ಮ ಪ್ರಾಚೀನ ಋಷಿ ಪರಂಪರೆಯಿoದ ಬಂದ ಪದ್ಧತಿಗಳಾದ ಪ್ರಾಣಾಯಾಮ, ಧ್ಯಾನ, ಯೋಗಾಸನಗಳು ಹಾಗೂ ಅತ್ಯಮೂಲ್ಯ ಜ್ಞಾನವನ್ನು ಮುಂದಿನ ಪರಂಪರೆಯವರಿಗೂ ನೀಡಬೇಕೆನ್ನುವುದು.

ಈಗಿನ ಪೀಳಿಗೆಯ ಮಕ್ಕಳಿಗೆ ಜೀವನ ಮೌಲ್ಯಗಳು, ಉತ್ತಮ ಸಂಸ್ಕಾರ ನೀಡುವುದರ ಮೂಲಕ ತಮ್ಮ ವ್ಯಕ್ತಿತ್ವ ವಿಕಸನಗೊಳಿಸಿಕೊಳ್ಳಲು ಬೇಕಾದ ವಾತಾವರಣವನ್ನು ಕಲ್ಪಿಸಿ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಲು ಪ್ರೇರಣೆ ನೀಡುವುದರ ಮೂಲಕ ಉತ್ತಮ ಸಮಾಜ ನಿರ್ಮಾಣದ ಪರಿಕಲ್ಪನೆ.

ಸಾಧಕರ ಅನುಭವಗಳು

ಜ್ಞಾನಜ್ಯೋತಿ ಯೋಗಕೇಂದ್ರ, ಶೃಂಗೇರಿ

ಕರ್ನಾಟಕ ರಾಜ್ಯದ, ಚಿಕ್ಕಮಗಳೂರು ಜಿಲ್ಲೆಯ, ಶೃಂಗೇರಿ ತಾಲ್ಲೂಕಿನ, ಕುಂಚೇಬೈಲ್‌ನ ಗಿಣಕಲ್‌ನಲ್ಲಿ, ಪ್ರಕೃತಿಯ ಮಡಿಲಿನಲ್ಲಿ ಶ್ರೀಯುತ ಸತೀಶ್ ಜೀ ಇವರ ದೂರದೃಷ್ಟಿಯ ಕಲ್ಪನೆಯ ಸಾಕ್ಷಿಯಾಗಿ 2017 ಫೆಬ್ರವರಿಯಲ್ಲಿ ಸ್ಥಾಪನೆಯಾದ ಸಂಸ್ಥೆಯೇ “ಜ್ಞಾನಜ್ಯೋತಿ ಯೋಗಕೇಂದ್ರ, ಶೃಂಗೇರಿ”. ತಾನಿರುವ ಜಾಗದಿಂದಲೇ ಜನರನ್ನು ಆಧ್ಯಾತ್ಮ, ಯೋಗದತ್ತ ಕೈಬೀಸಿ ಕರೆಯುವ ತಾಣ ಇದಾಗಿದೆ.

Image
Image

ಓಜಸ್ ಹೀಲಿಂಗ್ ಸೆಂಟರ್

ಶ್ರೀಯುತ ಸತೀಶ್ ಜೀ ಇವರು ಪ್ರಾಣಚೈತನ್ಯ ಚಿಕಿತ್ಸಕರಾಗಿರುತ್ತಾರೆ ಹಾಗೂ ಅದರಲ್ಲಿ ಪರಿಣತರಾಗಿರುತ್ತಾರೆ. ಅನೇಕ ಜನರು ಇವರಿಂದ ಈ ಚಿಕಿತ್ಸೆ ಪಡೆದ ನಂತರ ಉತ್ತಮ ಬದಲಾವಣೆಯನ್ನು ಕಂಡಿರುತ್ತಾರೆ. ಹಾಗೂ ಪ್ರಸ್ತುತ “ಓಜಸ್ ಹೀಲಿಂಗ್ ಸೆಂಟರ್” ಮೂಲಕ ಇದರ ತರಬೇತಿಯನ್ನು ನೀಡುತ್ತಿರುತ್ತಾರೆ. ಆಸಕ್ತರು ಇದನ್ನು ಕಲಿತು ತಮ್ಮ ಆರೋಗ್ಯ ಹಾಗೂ ಬೇರೆಯವರ ಆರೋಗ್ಯದ ಜೊತೆಗೆ ಸಮಾಜದ ಆರೋಗ್ಯ ಕಾಪಾಡಬೇಕೆಂಬುದು ಸತೀಶ್ ಗುರೂಜಿಯವರ ಉದ್ದೇಶವಾಗಿರುತ್ತದೆ.

Image

ಪ್ರಾಣಚೈತನ್ಯ ಚಿಕಿತ್ಸೆ

ಪ್ರಾಣಚೈತನ್ಯ ಚಿಕಿತ್ಸೆ ಎನ್ನುವುದು ಮೂಲತಃ ಋಷಿ ಮುನಿಗಳ ಕಾಲದಿಂದಲೂ ವಿಶೇಷವಾಗಿ ನಮ್ಮ ಭಾರತದಲ್ಲಿ ಬಳಕೆಯಲ್ಲಿದ್ದ ಪುರಾತನ ಕಲೆ ಮತ್ತು ವಿಜ್ಞಾನ. ಈ ವಿದ್ಯೆಯಲ್ಲಿ ಉಲ್ಲೇಖಿಸುವ ಪ್ರಭಾವಲಯ ಹಾಗೂ ದೇಹದಲ್ಲಿನ ಚಕ್ರಗಳು ಹಾಗೂ ಪ್ರಕೃತಿಯಲ್ಲಿರುವ ಹೇರಳವಾದ ಧನಾತ್ಮಕ ಶಕ್ತಿ ಇದರ ಆಧಾರದ ಮೇಲೆ ಚಿಕಿತ್ಸೆ ನೀಡುವಂತಹ ವಿದ್ಯೆ ಇದಾಗಿದೆ. ಅನೇಕ ಪ್ರಾಚೀನ ಗ್ರಂಥಗಳು ಹಾಗೂ ಉಪನಿಷತ್ತುಗಳಲ್ಲಿ ಇದರ ಬಗ್ಗೆ ಉಲ್ಲೇಖವಿದೆ.

...

ವಿಶೇಷತೆ : ಈ ವಿದ್ಯೆಯಲ್ಲಿ ಉಲ್ಲೇಖಿಸಿರುವ ಪ್ರಾಣಶಕ್ತಿ, ಪ್ರಭಾವಲಯ ಮತ್ತು ದೇಹದಲ್ಲಿನ ಚಕ್ರಗಳ ಅಸ್ತಿತ್ವ ಕೇವಲ ವಿವರಣೆಗೆ ಮೀಸಲಾಗಿರದೇ ಸಂಪೂರ್ಣ ಪ್ರಾಯೋಗಿಕ ಅಭ್ಯಾಸಗಳಿಂದ ಸಾಬೀತಾಗಿದೆ. ಸ್ವಯಂ ಚಿಕಿತ್ಸೆ, ಆಧ್ಯಾತ್ಮಿಕ ಸಾಧನೆ, ಮಾನಸಿಕ ಶಾಂತಿ ಹೊಂದುವುದಷ್ಟೇ ಅಲ್ಲದೇ ತಮ್ಮ ಕುಟುಂಬ, ಸ್ನೇಹಿತರು, ಸಮಾಜದಲ್ಲಿನ ಬೇರೆ ವ್ಯಕ್ತಿಗಳಿಗೆ, ಹಾಗೂ ಎಷ್ಟೇ ದೂರದಲ್ಲಿರುವವರಿಗೂ ಇರುವ ಸ್ಥಳದಲ್ಲೇ ಕುಳಿತು ಚಿಕಿತ್ಸೆ ನೀಡಬಹುದಾದ ಅದ್ಭುತ ವಿದ್ಯೆ ಇದಾಗಿದೆ.

ಇದು ಸ್ಪರ್ಶರಹಿತ, ಔಷಧರಹಿತ ಚಿಕಿತ್ಸೆ ಹಾಗೂ ಯಾವುದೇ ದುಷ್ಪರಿಣಾಮಗಳಿಲ್ಲದ ಪರಿಸರ ಸ್ನೇಹಿ ಚಿಕಿತ್ಸೆ ಇದಾಗಿದೆ.

ವೈಜ್ಞಾನಿಕ ಹಿನ್ನೆಲೆ : ಈ ಚಿಕಿತ್ಸೆಯು “ಪುನಶ್ಚೇತನ ನಿಯಮ” ಹಾಗೂ “ಜೀವಚೈತನ್ಯ ನಿಯಮ” ಎಂಬ ವೈಜ್ಞಾನಿಕ ತತ್ವಗಳ ಮೇಲೆ ಆಧಾರಿತವಾಗಿದ್ದು ಸಂಪೂರ್ಣ ವೈಜ್ಞಾನಿಕವಾಗಿದೆ. ಪ್ರಪಂಚದ ಬಹುತೇಕ ರಾಷ್ಟçಗಳ ವೈದ್ಯಕೀಯ ಚಿಕಿತ್ಸೆ ಜೊತೆಗೆ ಈ ವಿದ್ಯೆಯನ್ನು ಪೂರಕವಾಗಿ ಬಳಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.

ಕಾರ್ಯವಿಧಾನ : ದೇಹದಲ್ಲಿನ ಸಮಸ್ಯೆ/ರೋಗಗ್ರಸ್ಥ ಭಾಗ, ಋಣಾತ್ಮಕ ಶಕ್ತಿ ಹಾಗೂ ಸಂಬAಧಪಟ್ಟ ಚಕ್ರಗಳ ಸ್ಥಿತಿಗತಿಯನ್ನು ಬರಿಗೈನಿಂದಲೇ ಪರಿವೀಕ್ಷಣೆ (Scanning) ಮೂಲಕ ಗುರುತಿಸಿ ಅದನ್ನು ಹೊರತೆಗೆದು ನಾಶಪಡಿಸಿ ನಂತರ ಪ್ರಕೃತಿಯಲ್ಲಿ ಹೇರಳವಾಗಿ ದೊರೆಯುವ ಧನಾತ್ಮಕ ಪ್ರಾಣಶಕ್ತಿಯನ್ನು ಆ ಭಾಗಕ್ಕೆ ಹರಿಸಿ ಪುನಶ್ಚೇತನಗೊಳಿಸುವ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. (ಸರಿಯಾದ ತರಬೇತಿ ಅಗತ್ಯ).

kriyayoga

ಸ್ಮರಣಶಕ್ತಿ ಯೋಗ

8 ರಿಂದ 13 ವರ್ಷದ ಮಕ್ಕಳಿಗೋಸ್ಕರ ವಿಶೇಷವಾಗಿ ರೂಪಿಸಿರುವ ಶಿಬಿರ ಇದಾಗಿದ್ದು, ಅವರಲ್ಲಿರುವ ಆಂತರಿಕ ಶಕ್ತಿ, ನೆನಪಿನ ಶಕ್ತಿ ವೃದ್ಧಿಸುವಂತದ್ದು. ಹಾಗೂ ದೈಹಿಕ ಸಾಮರ್ಥ್ಯ, ಮಾನಸಿಕ ಸ್ಥೈರ್ಯ, ಸಂಸ್ಕಾರ, ತಂದೆ ತಾಯಿಯ ಮಹತ್ವ ಇವೆಲ್ಲವನ್ನೂ ಕಲಿಸುವಂತಹ ಶಿಬಿರ ಇದಾಗಿದ್ದು ಇದರ ಜೊತೆಗೆ ಜವಾಬ್ದಾರಿ ತೆಗೆದುಕೊಳ್ಳುವ ಮನಸ್ಥಿತಿ, ನಾಯಕತ್ವದ ಗುಣ, ಸಾಮಾಜಿಕವಾಗಿ ಎಲ್ಲರೊಂದಿಗೆ ಬೆರೆಯುವುದು, ವ್ಯಾಸಂಗದಲ್ಲಿ ಆಸಕ್ತಿ, ವಿಶೇಷ ಆಟೋಟಗಳು, ಶ್ಲೋಕಗಳು ಇವೆಲ್ಲವನ್ನೂ ಈ ಶಿಬಿರವು ಒಳಗೊಂಡಿದೆ.

kriyayoga

ಯೋಗಚೈತನ್ಯ ಶಿಬಿರ

ಈಗಿನ ಯುವಕ ಯುವತಿಯರಿಗೆ ಈಗ ಕಲಿಯುತ್ತಿರುವ ಶಿಕ್ಷಣದ ಜೊತೆಗೆ ಉತ್ತಮ ಜೀವನ ಸಂಸ್ಕಾರದ ಅಗತ್ಯವಿದೆ. ತಮ್ಮಲ್ಲಿರುವ ಆತ್ಮಶಕ್ತಿಯನ್ನು ಗುರುತಿಸಿಕೊಂಡು ಮುಂದಿನ ಭವಿಷ್ಯ ಉಜ್ವಲವಾಗಿಸಿಕೊಳ್ಳಲು ಬೇಕಾದ ವಾತಾವರಣವನ್ನು ಕಲ್ಪಿಸಿ ಸಮಾಜದ ಉತ್ತಮ ವ್ಯಕ್ತಿಯಾಗಲು ಪ್ರೇರಣೆ ನೀಡುವುದರ ಜೊತೆಗೆ ತಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಲು ಬೇಕಾದ ಪ್ರಾಣಾಯಾಮ, ಧ್ಯಾನ, ಯೋಗಾಸನಗಳು ಹಾಗೂ ಇದರೊಂದಿಗೆ ವ್ಯಕ್ತಿತ್ವ ವಿಕಸನಕ್ಕೆ ಅಗತ್ಯವಾದ ಜ್ಞಾನವನ್ನು ಈ ಶಿಬಿರದ ಮೂಲಕ ಯುವಕ ಯುವತಿಯರಿಗೆ ಹೇಳಿಕೊಡುವುದರ ಜೊತೆ ಅನುಭವ ಮಾಡಿಕೊಡಲಾಗುತ್ತದೆ.

kriyayoga

ಆರೋಗ್ಯ ಶಿಬಿರ

ಮನುಷ್ಯನ ನಿಜವಾದ ಸಂಪತ್ತು ಎಂದರೆ ಅದು “ಆರೋಗ್ಯ”. ಆ ಆರೋಗ್ಯ ಇಲ್ಲದಿದ್ದರೆ ನಾವು ಏನೇ ಗಳಿಸಿದರೂ ಅದಕ್ಕೆ ಮಹತ್ವ ಇರುವುದಿಲ್ಲ. ಆದ್ದರಿಂದ ಈ ಶಿಬಿರದಲ್ಲಿ ಪ್ರಾಣಾಯಾಮ, ಧ್ಯಾನ, ಆಹಾರ ಪದ್ಧತಿ, ಜೀವನಕಲೆ ಇವುಗಳನ್ನು ಕಲಿಸುವುದಷ್ಟೇ ಅಲ್ಲದೇ ಅನುಭವ ಮಾಡಿಸುವುದರಿಂದ ಅದರ ಫಲಿತಾಂಶವನ್ನು ಸ್ವತಃ ಭಾಗವಹಿಸಿದವರೇ ಅನುಭವ ಮಾಡಬಹುದು. ಇದು ಇಲ್ಲಿನ ಶಿಬಿರದ ವಿಶೇಷತೆ. ಹಾಗೂ ಇಲ್ಲಿ ನೀಡುವ ಜ್ಞಾನದಿಂದ ವ್ಯಕ್ತಿತ್ವ ವಿಕಸನವಾಗುವುದರ ಜೊತೆಗೆ ಒಂದು ಒಳ್ಳೆಯ ಜೀವನಶೈಲಿಯನ್ನು ರೂಪಿಸಿಕೊಳ್ಳಲು ಸಹಕಾರವನ್ನು ನೀಡುವ ಶಿಬಿರವಾಗಿದೆ.

ಆನ್‌ಲೈನ್ ಯೋಗ ಕ್ಲಾಸ್ ಕೋರ್ಸ್

ವ್ಯಕ್ತಿಯು ಹಂತ ಹಂತವಾಗಿ ಶುದ್ಧಗೊಳಿಸಿಕೊಂಡು ಉತ್ತಮ ಜೀವನ ನಡೆಸುವುದಕ್ಕೆ ಸಹಾಯಕವಾಗುವಂತೆ ಆನ್‌ಲೈನ್ ಕ್ಲಾಸ್‌ನ್ನು ೩ ಹಂತಗಳಲ್ಲಿ ನೀಡಲಾಗುತ್ತದೆ. ಅದು ಕ್ರಮಬದ್ಧವಾಗಿ ದೇಹಕ್ಕೆ ಕ್ರಿಯಾಯೋಗ, ಮನಸ್ಸಿಗೆ ಧ್ಯಾನಯೋಗ ಹಾಗೂ ಬುದ್ಧಿಗೆ ಜ್ಞಾನಯೋಗ.
kriyayoga

ಕ್ರಿಯಾಯೋಗ

ಇತ್ತೀಚಿನ ದಿನಗಳಲ್ಲಿ ನಮ್ಮ ದೇಹವು ದೈಹಿಕ ಶ್ರಮವಿಲ್ಲದೇ ಅದರಿಂದ ಅನಾರಾಗ್ಯ ಉಂಟಾಗುತ್ತಿರುವುದು ಸರ್ವೇಸಾಮಾನ್ಯವಾಗಿದೆ. ಅದಕ್ಕೆಂದೇ ರೂಪಿಸಿರುವ ಹಂತವೇ “ಕ್ರಿಯಾಯೋಗ”

  1. ಸೂಕ್ಷ್ಮ ವ್ಯಾಯಾಮಗಳು : ಸಾಮಾನ್ಯವಾಗಿ ಯೋಗಾಸನಗಳಿಗೆ ಅದರದ್ದೇ ಆದ ಹೆಸರುಗಳಿರುತ್ತವೆ. ಆದರೆ ಇದರಲ್ಲಿ ಹೇಳಿಕೊಡುವ ಕೆಲವೊಂದು ವ್ಯಾಯಾಮಗಳಿಗೆ ಪ್ರತ್ಯೇಕವಾಗಿ ಯಾವುದೇ ಹೆಸರುಗಳಿಲ್ಲದಿದ್ದರೂ ಇವುಗಳನ್ನು ಮಾಡುವುದರಿಂದ ನಮ್ಮ ದೇಹದ ಭಾಗಗಳಿಗೆ ಅಗತ್ಯವಾದ ವ್ಯಾಯಾಮವನ್ನು ಅದ್ಭುತ ರೀತಿಯಲ್ಲಿ ಒದಗಿಸುತ್ತವೆ. ಜೊತೆಗೆ ಉನ್ನತ ಮಟ್ಟದ ಆಸನಗಳನ್ನು ಮಾಡಲು ಸಹಕರಿಸುತ್ತವೆ. ಇವುಗಳಿಗೆ ಒಟ್ಟಾರೆಯಾಗಿ "ಸೂಕ್ಷ್ಮ ವ್ಯಾಯಾಮಗಳು" ಎಂದು ಕರೆಯಲಾಗುತ್ತದೆ. ಇದರ ಜೊತೆಗೆ ಯೋಗಾಸನಗಳನ್ನೂ ಹೇಳಿಕೊಡಲಾಗುತ್ತದೆ. ಎಲ್ಲಾ ವಯೋಮಿತಿಯವರೂ ಸರಳವಾಗಿ ಇದನ್ನು ಅಳವಡಿಸಿಕೊಂಡು ಉತ್ತಮ ಫಲಿತಾಂಶವನ್ನು ಪಡೆಯಬಹುದಾಗಿದೆ.

  2. ಪ್ರಾಣಾಯಾಮ : "ಪ್ರಾಣ" ಎಂದರೆ ಉಸಿರು. "ಆಯಾಮ" ಎಂದರೆ ವಿಸ್ತಾರ. ಪ್ರಕೃತಿಯಲ್ಲಿರುವ ಪ್ರಾಣವನ್ನು ಉಪಯೋಗಿಸಿಕೊಂಡು, ಉಸಿರನ್ನು ಮಾಧ್ಯಮವಾಗಿರಿಸಿ ದೇಹದ ಪ್ರಾಣವನ್ನು ವಿಸ್ತಾರಗೊಳಿಸುವ ಪ್ರಕ್ರಿಯೆಗೆ "ಪ್ರಾಣಾಯಾಮ" ಎಂದು ಕರೆಯುತ್ತಾರೆ. ಕ್ರಮಬದ್ಧವಾದ ಉಸಿರಾಟವನ್ನು ನಡೆಸುವುದಕ್ಕೆ ಪ್ರಾಣಾಯಾಮವೆಂದು ಹೆಸರು. ಪ್ರಾಣಾಯಾಮವು ಪ್ರಾಚೀನ ಋಷಿ ಮುನಿಗಳ ಮುಖೇನ ಪಾರಂಪರಿಕವಾಗಿ ಬಂದoತಹ ಪದ್ಧತಿಗಳಲ್ಲಿ ಒಂದು. ಇದು ನಮ್ಮ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತದೆ. ದೀರ್ಘಾವಧಿ ಖಾಯಿಲೆಗಳಾದ ಬಿಪಿ, ಶುಗರ್, ಅಸ್ತಮಾ, ಅಲರ್ಜಿಗಳನ್ನು ಹತೋಟಿಗೆ ತರುವುದು ಹಾಗೂ ಸೊಂಟನೋವು, ಬೆನ್ನುನೋವು ಇತರ ನೋವುಗಳನ್ನು ಕಡಿಮೆ ಮಾಡಿಕೊಳ್ಳುವುದರ ಜೊತೆಗೆ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸಹಕಾರವನ್ನು ನೀಡುತ್ತದೆ.

  3. ಯೋಗನಿದ್ರೆ : ಪ್ರಾಚೀನ ಕಾಲದಲ್ಲಿ ಋಷಿಮುನಿಗಳು ವಿಶ್ರಾಂತಿಗಾಗಿ ನಿದ್ರೆಯನ್ನು ಅವಲಂಬಿಸದೆ ವಿಶೇಷವಾದ ಪದ್ಧತಿಯನ್ನು ಬಳಸುತ್ತಿದ್ದರು ಅದೇ "ಯೋಗನಿದ್ರೆ". ಇದನ್ನು ಮಾಡುವುದರಿಂದ ದೈಹಿಕ ವಿಶ್ರಾಂತಿ ದೊರೆಯುವುದರ ಜೊತೆಗೆ ದೇಹದ ಸೂಕ್ಷ್ಮತೆ ಹೆಚ್ಚುತ್ತದೆ ಹಾಗೂ ಕಡಿಮೆ ಅವಧಿಯಲ್ಲಿ ಹೆಚ್ಚು ವಿಶ್ರಾಂತಿಯ ಅನುಭವ ಮಾಡುವುದು ಇದರ ವಿಶೇಷವಾಗಿದೆ. ನಾವು ಪ್ರತಿದಿನ ಚಿಂತೆ, ಒತ್ತಡ, ಯೋಚನೆಗಳೊಂದಿಗೆ ನಿದ್ರಿಸುವುದರಿಂದ ನಿದ್ರೆಯ ನಂತರ ನಮಗೆ ವಿಶ್ರಾಂತಿಯ ಅನುಭವವಾಗದೇ ಆಲಸ್ಯ ಹೆಚ್ಚಾಗುತ್ತದೆ. ಆದರೆ ಯೋಗನಿದ್ರೆಯು ಎಚ್ಚರಿಕೆಯ ವಿಶ್ರಾಂತ ಸ್ಥಿತಿ. ಇದನ್ನು ಮಾಡುವುದರಿಂದ ದೇಹ ಹಾಗೂ ಮನಸ್ಸು ಸಂಪೂರ್ಣ ವಿಶ್ರಾಂತಿಗೊಂಡು ಯೋಗನಿದ್ರೆಯ ನಂತರ ಚೈತನ್ಯಯುತವಾಗಿ ಇರಲು ಸಾಧ್ಯವಾಗುತ್ತದೆ.

ಧ್ಯಾನಯೋಗ

ಧ್ಯಾನಯೋಗವು ಧ್ಯಾನಪದ್ಧತಿಯನ್ನು ಒಳಗೊಂಡ ಹಂತವಾಗಿದೆ. ಧ್ಯಾನ ಪದ್ಧತಿಯು ಪ್ರಾಚೀನ ಋಷಿಪರಂಪರೆಯಿoದ ಬಂದoತಹ ವಿದ್ಯೆಯಾಗಿದೆ. ಧ್ಯಾನ ಎನ್ನುವುದು ಮನಸ್ಸನ್ನು ನಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಇರುವ ಅದ್ಭುತ ವಿದ್ಯೆಯಾಗಿದೆ. ನಮ್ಮ ಎಲ್ಲಾ ಖಾಯಿಲೆಗಳ ಮೂಲ ಮನಸ್ಸು ಆರೋಗ್ಯವಾಗಿಲ್ಲದೇ ಇರುವುದು. ಈಗಿನ ಆಧುನಿಕ ಯುಗದಲ್ಲಂತೂ ಮನಸ್ಸಿಗೆ ಸಂಬoಧಪಟ್ಟoತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದ್ದರಿಂದ ಮನಸ್ಸಿನ ಆರೋಗ್ಯ ಕಾಪಾಡಿಕೋಳ್ಳುವುದು ಅತೀ ಮುಖ್ಯವಾಗಿದೆ. ಅದಕ್ಕೆ ಪೂರಕವಾಗಿ ರೂಪಿತವಾದ ಹಂತವೇ “ ಧ್ಯಾನಯೋಗ”.

ಇದರಲ್ಲಿ ಮನಸ್ಸಿನ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ ಹಾಗೂ ಯೋಚನೆಗಳು, ಅತಿಯಾಗಿ ಬರುವ ಯೋಚನೆಗಳೊಂದಿಗೆ ಇರುವುದು ಹೇಗೆ? ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳುವುದು ಹೇಗೆ? ನೆನಪಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಹೇಗೆ? ಇವೆಲ್ಲವನ್ನು ಇದರಲ್ಲಿ ಪರಿಣಾಮಕಾರಿಯಾಗಿ ಹೇಳಿಕೊಡಲಾಗುತ್ತದೆ.

kriyayoga
kriyayoga

ಜ್ಞಾನಯೋಗ

ಜ್ಞಾನಯೋಗವು ಬುದ್ಧಿಗೆ ನೀಡುವ “ಜ್ಞಾನ”ಕ್ಕೆ ಸಂಬoಧಿಸಿದ ಹಂತವಾಗಿದೆ .ದೇಹ ಮತ್ತು ಮನಸ್ಸು ಶುದ್ಧಿಯಾದ ನಂತರ ನಮ್ಮ ಬುದ್ದಿಗೆ ಒಳ್ಳೆಯ ಸಂಸ್ಕಾರ ನೀಡುವುದು ಅತಿ ಮುಖ್ಯವಾಗುತ್ತದೆ. ಏಕೆಂದರೆ ಬುದ್ಧಿಯ ಕೆಲಸವೇ ಸರಿ-ತಪ್ಪು , ಒಳ್ಳೆಯದ್ದು-ಕೆಟ್ಟದ್ದು ಇವುಗಳ ನಿರ್ಧಾರ ಮಾಡುವುದು. ಯಾವಾಗ ಬುದ್ಧಿಗೆ ಸರಿಯಾದ ಸಂಸ್ಕಾರ ನೀಡುತ್ತೇವೆ ಆಗ ಅದು ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಆದ್ದರಿಂದ ಆ ಬುದ್ಧಿಗೆ ಒಳ್ಳೆಯ ಜ್ಞಾನದ ಮೂಲಕ ಸಂಸ್ಕಾರವನ್ನು ನೀಡುವುದಕ್ಕೆ ಸಾಧ್ಯವಿದೆ.

ಇದರಿಂದ ನಾವು ಉತ್ತಮ ವ್ಯಕ್ತಿತ್ವವನ್ನು ಹೊಂದುವುದಕ್ಕೆ ಸಾಧ್ಯ. ಆದ್ದರಿಂದ ಈ ಜ್ಞಾನಯೋಗದಲ್ಲಿ ಜೀವನಕಲೆ, ಒತ್ತಡಮುಕ್ತ ಜೀವನವನ್ನು ನಡೆಸುವುದು ಹೇಗೆ?, ಆನಂದಮಯವಾಗಿ ಜೀವನ ನಡೆಸುವುದು ಹೇಗೆ?, ಮಾನಸಿಕ ನೆಮ್ಮದಿ ಪಡೆಯುವುದು ಹೇಗೆ? ಹಾಗೂ ಮುಖ್ಯವಾಗಿ ಆಧ್ಯಾತ್ಮ ಬೆಳವಣಿಗೆ ಇವುಗಳಿಗೆ ಸಂಬAಧಿಸಿದ ಜ್ಞಾನವನ್ನು ಅದ್ಭುತ ರೀತಿಯಲ್ಲಿ ಹಂತ ಹಂತವಾಗಿ ನೀಡಲಾಗುತ್ತದೆ.

ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತ ಯೋಗತರಬೇತಿ ಶಿಬಿರ ಕಾರ್ಯಕ್ರಮ

ಮಕ್ಕಳಿಗೆ ನಾವು ಬಾಲ್ಯದಲ್ಲಿಯೇ ಉತ್ತಮ ಸಂಸ್ಕಾರವನ್ನು ನೀಡುವುದರಿಂದ ಮಕ್ಕಳ ಭವಿಷ್ಯ ಉಜ್ವಲವಾಗಿರುತ್ತದೆ. ಅನೇಕ ಗ್ರಾಮೀಣ ಹಾಗೂ ನಗರ ಭಾಗದಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಅವರಿರುವ ಶಾಲೆಗೇ ತೆರಳಿ ಯೋಗ ತರಬೇತಿಯನ್ನು ನೀಡಲಾಯಿತು.

ಅವರು ಶಾಲೆಯಲ್ಲಿ ಕಲಿಯುವ ಶಿಕ್ಷಣದ ಜೊತೆ ಜೊತೆಗೆ ಒಳ್ಳೆಯ ಸಂಸ್ಕಾರದ ಶಿಕ್ಷಣ ನೀಡುವುದೂ ಅಗತ್ಯವಾಗಿದೆ. ೮ ದಿನಗಳ ತರಬೇತಿ ಕಾರ್ಯಕ್ರಮ ಇದಾಗಿದ್ದು ಇಲ್ಲಿ ಪ್ರತಿ ದಿನವೂ ಮಕ್ಕಳು ಹೊಸ ವಿಷಯಗಳನ್ನು ಕಲಿತು ಅದರ ಅನುಭವ ಮಾಡುತ್ತಾರೆ. ನೆನಪಿನ ಶಕ್ತಿ ವೃದ್ಧಿ, ಆರೋಗ್ಯದಲ್ಲಿ ಉತ್ತಮ ಬದಲಾವಣೆ, ವ್ಯಕ್ತಿತ್ವದಲ್ಲಿ ಉತ್ತಮ ಬದಲಾವಣೆ ಇವೆಲ್ಲವನ್ನೂ ಈ ತರಬೇತಿಯ ಅವಧಿಯಲ್ಲಿ ಮಕ್ಕಳಲ್ಲಿ ಗುರುತಿಸಲು ಸಾಧ್ಯವಾಯಿತು.

ಕಾರಾಗೃಹದಲ್ಲಿ ಯೋಗಶಿಬಿರ

ಕಾರಾಗೃಹ ಎನ್ನುವುದು ತಪ್ಪು ಮಾಡಿದವರನ್ನಿರಿಸುವ ಸ್ಥಳ ಎಂಬುದಷ್ಟೇ ನಮಗಿರುವ ಕಲ್ಪನೆ. ಆದರೆ ಅಂತಹ ಜಾಗಕ್ಕೆ ತೆರಳಿ ಅಲ್ಲಿರುವ ವ್ಯಕ್ತಿಗಳಿಗೂ ಒಳ್ಳೆಯ ಜ್ಞಾನವನ್ನು ನೀಡಬಹುದೆಂಬ ಸತೀಶ್ ಜೀ ಅವರ ಅದ್ಭುತ ಯೋಚನೆಯ ಫಲವಾಗಿ 2016ರಲ್ಲಿ ಚಿಕ್ಕಮಗಳೂರಿನ ಜಿಲ್ಲಾ ಕಾರಾಗೃಹದಲ್ಲಿ ಸುಮಾರು ೮೦ ಜನ ಕೈದಿಗಳಿಗೆ ಯೋಗ ಶಿಬಿರವನ್ನು ಹಮ್ಮಿಕೊಂಡಿದ್ದರು. ಅವರೂ ಕೂಡ ಇದರಿಂದ ತಮ್ಮ ಜೀವನದಲ್ಲಿ ಉತ್ತಮ ಬದಲಾವಣೆ ಮಾಡಿಕೊಳ್ಳಬಹುದೆಂಬ ಉದ್ದೇಶದಿಂದ ಈ ಶಿಬಿರವನ್ನು ಆಯೋಜಿಸಿ ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು.

“ನ್ಯೂ ಭುವನೇಂದ್ರ ಆಯುರ್ವೇದ ಫಾರ್ಮಸಿ ಕಂಪನಿ” , ಕಟ್ಟಪಾಡಿ, ಉಡುಪಿ ಇಲ್ಲಿನ ನೌಕರರಿಗೆ ಯೋಗ ತರಬೇತಿ ಶಿಬಿರ

ಉಡುಪಿಯ ಕಟ್ಟಪಾಡಿ ಇಲ್ಲಿನ ನ್ಯೂ ಭುವನೇಂದ್ರ ಆಯುರ್ವೇದ ಫಾರ್ಮಸಿ ಕಂಪನಿಯಲ್ಲಿ ಕೆಲಸ ಮಾಡುವ ನೌಕರರಿಗೆ ಯೋಗ ತರಬೇತಿಯನ್ನು ನೀಡಲಾಯಿತು.

ಪ್ರತಿ ವರ್ಷವೂ ಮಕ್ಕಳಿಗಾಗಿ “ಸ್ಮರಣ ಶಕ್ತಿ ಯೋಗ ಶಿಬಿರ” , ಯುವಕ-ಯುವತಿಯರಿಗಾಗಿ “ಯೋಗ ಚೈತನ್ಯ ಶಿಬಿರ” ಹಾಗೂ ದೊಡ್ಡವರಿಗಾಗಿ “ಆರೋಗ್ಯ ಶಿಬಿರ” ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಮೂಡುಬಿದ್ರಿಯ Excellent College ನಲ್ಲಿ ಯೋಗಶಿಬಿರ

ಹೆಸರಾಂತ ಕಾಲೇಜ್ ಗಳಲ್ಲಿ ಒಂದಾದ ಮೂಡುಬಿದ್ರಿಯ Excellent College ನಲ್ಲಿ ವಿದ್ಯಾರ್ಥಿಗಳಿಗಾಗಿ ಯೋಗಶಿಬಿರವನ್ನು ಆಯೋಜನೆ ಮಾಡಲಾಗಿತ್ತು. ಸುಮಾರು ೧೩೦ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿರುತ್ತಾರೆ.

ಉಚಿತ ಹೊಲಿಗೆ ತರಬೇತಿ ಶಿಬಿರ

ಶೃಂಗೇರಿಯಲ್ಲಿ ಉಚಿತವಾಗಿ ಹೊಲಿಗೆ ತರಬೇತಿ ಶಿಬಿರವನ್ನು ಆಯೋಜನೆ ಮಾಡಿ ಅದರ ಮೂಲಕ ಅನೇಕರಿಗೆ ಹೊಲಿಗೆಯನ್ನು ಹೇಳಿಕೊಡಲಾಯಿತು.

ಗೋಶಾಲೆ ನಿರ್ಮಾಣ

“ಗೋವುಗಳು” ನಿಸ್ವಾರ್ಥತೆ, ಅನುಗ್ರಹ ಮತ್ತು ಸಮೃದ್ದಿಯ ಸಂಕೇತವಾಗಿವೆ. ಆದ್ದರಿಂದ ಅವುಗಳನ್ನು ಪೂಜ್ಯನೀಯ ಭಾವನೆಯಿಂದ ಕಾಣಲಾಗುತ್ತದೆ. ಗೋವುಗಳು ಎಲ್ಲವನ್ನೂ ಶುದ್ಧೀಕರಿಸುವ ಶಕ್ತಿಯನ್ನು ಹೊಂದಿರುತ್ತವೆ ಎಂದು ನಂಬಲಾಗುತ್ತದೆ.

ಈಗಿನ ಆಧುನಿಕತೆಯ ಕಾಲದಲ್ಲಿ ಇಂತಹ ಅಮೂಲ್ಯವಾದ ಗೋಸಂಪತ್ತು ನಾಶದ ಸ್ಥಿತಿ ತಲುಪುತ್ತಿದೆ. ಹಾಗಾಗಿ ಅದನ್ನು ಸಂರಕ್ಷಿಸುವ ಸಲುವಾಗಿ ಕುಂಚೇಬೈಲಿನ ಧ್ಯಾನ ಮಂದಿರದಲ್ಲಿ ಅನೇಕ ಹಸುಗಳನ್ನು ಸಾಕಲಾಗಿದೆ. ಈ ಜಾಗದಲ್ಲಿ ಹಸುಗಳು ಸ್ವಚ್ಛಂದವಾಗಿ ವಿಹರಿಸುತ್ತಾ, ಒಳ್ಳೆಯ ಪರಿಸರದಲ್ಲಿ ಬೆಳೆಯುತ್ತಿವೆ.

ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು

1. ಜ್ಞಾನಜ್ಯೋತಿ ಮಂದಿರದಲ್ಲಿ ಶೃಂಗೇರಿಯ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದ ಜಗದ್ಗುರುಗಳಾದ ಪರಮಪೂಜ್ಯ ಶ್ರೀ ಶ್ರೀ ಭಾರತೀತೀರ್ಥ ಮಹಾಸನ್ನಿಧಾನಂಗಳವರ ಪರಿಪೂರ್ಣ ಆಶೀರ್ವಾದದೊಂದಿಗೆ ತತ್ಕರಕಮಲ ಸಂಜಾತರಾದ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತಿ ಸನ್ನಿಧಾನಂಗಳವರ ದಿವ್ಯ ಸಾನ್ನಿಧ್ಯ.

17 ಜೂನ್ 2019 ಶೃಂಗೇರಿಯ ಜಗದ್ಗುರುಗಳಾದ ಶ್ರೀ ಶ್ರೀ ವಿಧುಶೇಖರ ಭಾರತಿ ಸನ್ನಿಧಾನಂಗಳವರು ಕುಂಚೇಬೈಲಿನ ಜ್ಞಾನಜ್ಯೋತಿ ಮಂದಿರಕ್ಕೆ ಆಗಮಿಸಿರುತ್ತಾರೆ.ಆ ಸಂದರ್ಭದಲ್ಲಿ ಪೂರ್ಣಕುಂಭ ಸ್ವಾಗತ ಕೋರಲಾಯಿತು. ನಂತರ ಸನ್ನಿಧಾನಂಗಳವರು ಆಶೀರ್ವಚನ ನೀಡಿ ಸರ್ವರಿಗೂ ಶುಭಾಶೀರ್ವಾದವÀನ್ನು ನೀಡಿರುತ್ತಾರೆ.

2. “ಹೃದಯ ಸಂಗಮ”

“ಹೃದಯ ಸಂಗಮ” ಹೆಸರೇ ಸೂಚಿಸುವಂತೆ ಎಲ್ಲ ಹೃದಯಗಳ ಸಂಗಮವಾಗಿಸುವ ಒಂದು ಅದ್ಭುತ ಕಾರ್ಯಕ್ರಮ. ವರ್ಷಕ್ಕೊಮ್ಮೆ ಎಲ್ಲರೂ ಒಟ್ಟಾಗಿ ಸೇರಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸುವುದರಿಂದ ದೈವೀಕ ಶಕ್ತಿ ಹೆಚ್ಚುವುದರ ಜೊತೆಗೆ ಎಲ್ಲರೂ ಒಟ್ಟಾಗಿ ಆನಂದವಾಗಿ ಇರಲು ಒಂದು ಸದಾವಕಾಶವನ್ನು ಈ ಕಾರ್ಯಕ್ರಮವು ಮಾಡಿಕೊಟ್ಟಿರುತ್ತದೆ ಹಾಗೂ ‘ವಸುದೈವ ಕುಟುಂಬಕo’ ಪರಿಕಲ್ಪನೆಯನ್ನು ಈ ಜಾಗದಲ್ಲಿ ಅನುಭವ ಮಾಡಬಹುದಾಗಿದೆ.

ಇಲ್ಲಿ ನಡೆಯುವ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳೂ ಲೋಕಕಲ್ಯಾಣಾರ್ಥವಾಗಿಯೇ ನಡೆಯುವುದು ವಿಶೇಷವಾಗಿದೆ. ಯಾವುದೇ ಕಾರ್ಯವನ್ನು ಒಟ್ಟಿಗೆ ಮಾಡುವುದರಿಂದ ಅಲ್ಲಿ ಉಂಟಾಗುವ ದೈವೀಕ ಶಕ್ತಿಯನ್ನು ಪ್ರಕೃತಿಗೆ ನೀಡುವುದರಿಂದ ಪ್ರಕೃತಿ ಹಾಗೂ ಸಮಾಜದಲ್ಲಿ ನಡೆಯುತ್ತಿರುವ ವೈಪರೀತ್ಯಗಳು, ಅನಾಹುತಗಳು ನಿವಾರಣೆಯಾಗಿ ಲೋಕಕಲ್ಯಾಣವಾಗಲಿ ಎನ್ನುವುದು ಈ ಕಾರ್ಯಕ್ರಮಗಳ ಮೂಲ ಉದ್ದೇಶವಾಗಿದೆ.

ಇಲ್ಲಿ ಯಾವುದೇ ಭೇಧ-ಭಾವವಿಲ್ಲದೇ ಎಲ್ಲರೂ ಒಟ್ಟಾಗಿ ಆನಂದವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಹಾಗೇ ಈಗಿನ ಆಧುನಿಕ ಯುಗದ ವಿಭಕ್ತ ಕುಟುಂಬಗಳಿಗೆ ಹಾಗೂ ಮುಖ್ಯವಾಗಿ ಮಕ್ಕಳಿಗೆ ಇಂತಹ ಕಾರ್ಯಕ್ರಮಗಳ ವಾತಾವರಣದ ಅವಶ್ಯಕತೆ ಇದೆ. ಮಕ್ಕಳು ಇದರಲ್ಲಿ ಭಾಗವಹಿಸಿ ಅವರಿಗೇ ತಿಳಿಯದಂತೆ ಒಳ್ಳೆಯ ಸಂಸ್ಕಾರವನ್ನು ಬೆಳೆಸಿಕೊಳ್ಳುತ್ತಾರೆ. ಪ್ರತೀ ವರ್ಷ ಬಂದು ಇದರಲ್ಲಿ ಭಾಗವಹಿಸುತ್ತಾ ಆ ಮಕ್ಕಳು ಉತ್ತಮ ರೀತಿಯ ಬೆಳವಣಿಗೆ ಹೊಂದುವುದನ್ನು ಕಾಣಬಹುದಾಗಿದೆ. ಕೇವಲ ಮಕ್ಕಳಷ್ಟೇ ಅಲ್ಲದೇ ಎಲ್ಲಾ ವಯೋಮಿತಿಯ ಜನರೂ ಇಲ್ಲಿ ಬಂದು ಆನಂದದಿoದ ಇದರಲ್ಲಿ ಪಾಲ್ಗೊಂಡು ವಿಶೇಷವಾದ ಜ್ಞಾನವನ್ನು, ಅನುಭವವನ್ನು ಪಡೆಯುತ್ತಾರೆ. ಕುಟುಂಬ ಹಾಗೂ ಸಂಬAಧಗಳ ಮಹತ್ವ, ನಮ್ಮ ಸಂಸ್ಕೃತಿ ಹಾಗೂ ಪದ್ಧತಿಗಳ ಬಗೆಗಿನ ಅರಿವು ಇವೆಲ್ಲವೂ ಈ ಕಾರ್ಯಕ್ರಮದ ಮೂಲಕ ಅನಾವರಣಗೊಳ್ಳತ್ತವೆ.

3. “ಶ್ರೀನಿವಾಸ ಕಲ್ಯಾಣ ಮಹೋತ್ಸವ”

ಮಲೆನಾಡಿನ ಸುಂದರ ಮಡಿಲಿನಲ್ಲಿ ಇರುವ ದೇಶದ ಐತಿಹಾಸಿಕ ಶಾರದಾಂಬೆಯ ಸನ್ನಿಧಿಯಾದ ಶೃಂಗೇರಿಯಲ್ಲಿ ಹಿಂದೆದೂ ಆಗಿರದ ವಿಶೇಷ ಕಾರ್ಯಕ್ರಮಕ್ಕೆ ಜ್ಞಾನಜ್ಯೋತಿ ಮಂದಿರವು ಸಾಕ್ಷಿಯಾಯಿತು. ಅದೇ “ಶ್ರೀನಿವಾಸ ಕಲ್ಯಾಣ ಮಹೋತ್ಸವ”. ಈ ಕಾರ್ಯಕ್ರಮ ಮಾಡುವ ಮುಖ್ಯ ಉದ್ದೇಶವೇನೆಂದರೆ ಲೋಕಕಲ್ಯಾಣ ಹಾಗೂ ನಮ್ಮ ಪಂಚೇದ್ರಿಯಗಳನ್ನು ಶುದ್ಧಿ ಮಾಡಿಕೊಳ್ಳುವುದು. ಹಾಗೂ ನಮ್ಮ ಸಂಕಲ್ಪಗಳನ್ನು ಭಗವಂತನ ಮುಂದೆ ಇಟ್ಟು ಅವನ ಆಶೀರ್ವಾದವನ್ನು ಪಡೆಯುವುದು, ಭಗವಂತನ ಮೇಲೆ ಇರುವ ನಂಬಿಕೆ, ವಿಶ್ವಾಸವನ್ನು ಹೆಚ್ಚಿಸಿಕೊಂಡು ಕೆಲ ಕ್ಷಣಗಳು ಜಗದೊಡೆಯನ ಜೊತೆ ಇದ್ದು, ಅವನ ಕೃಪೆಗೆ ಪಾತ್ರರಾಗುವುದು. ನಮ್ಮೆಲ್ಲರ ಈಪ್ಸಿತದಾಯಕ ಜಗದೊಡೆಯ ವೆಂಕಟರಮಣನೇ ಆಗಮಿಸಿ, ಮನದನ್ನೆಯಾದ ಪದ್ಮಾವತಿಯನ್ನು ವರಿಸಿ ಭಕ್ತರನ್ನು ಹರಸುವ ಅಭೂತಪೂರ್ವ ಸಂಭ್ರಮದ ಕಾರ್ಯಕ್ರಮ ಇದಾಗಿದೆ.

ಎಲ್ಲಿ ಭಕ್ತರು ಸೇರುತ್ತಾರೋ ಅದೇ ಭಗವಂತನ ಆವಾಸ ಸ್ಥಾನವಾಗುವುದು. ಎಲ್ಲಿ ಭಗವಂತನ ಆವಾಸ ಸ್ಥಾನವಾಗುವುದೋ ಅಲ್ಲಿ ಸುವೃಷ್ಟಿ ಹಾಗೂ ಸುಭಿಕ್ಷೆ ಉಂಟಾಗುವುದು ಎಂಬುದು ಅನುಭವವೇದ್ಯರ ಅಭಿಪ್ರಾಯವಾಗಿದೆ. ಅತ್ಯಂತ ವೈಭವದಿಂದ ನಡೆದ ಈ ಕಾರ್ಯಕ್ರಮದಲ್ಲಿ ಸುಮಾರು ೨೦೦೦ ದಂಪತಿಗಳು ಹಾಗೂ ಒಟ್ಟಾರೆಯಾಗಿ ೪,೫೦೦-೫೦೦೦ ಜನರು ಇದರಲ್ಲಿ ಭಾಗವಹಿಸಿ ಸಾರ್ಥಕತೆಯನ್ನು ಪಡೆದಿರುತ್ತಾರೆ. ಕಾರ್ಯಕ್ರಮದ ಕೊನೆಯಲ್ಲಿ ಮದುವೆ ಆಗದ ಯುವಕ ಯುವತಿಯರಿಗೆ ವಿಶೇಷವಾಗಿ ಸಂಕಲ್ಪವನ್ನು ಮಾಡಿಸಲಾಯಿತು. ಭಾಗವಹಿಸಿದ್ದ ಸುಮಾರು ವರ್ಷಗಳಿಂದ ಮದುವೆಯಾಗದೇ ಇದ್ದ ಸುಮಾರು ೪೨ ಜನ ಕುಮಾರಿ ಹಾಗೂ ಕುಮಾರರಲ್ಲಿ ೩೮ ಜನರಿಗೆÀ ಕಲ್ಯಾಣವಾಗಿದ್ದು ಈ ಕಾರ್ಯಕ್ರಮದ ವಿಶೇಷ. ಹಾಗೆಯೇ ಈ ಶುಭಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳೂ ನೆರವೇರಿರುತ್ತದೆ.

4. ಗುರು ಪೂರ್ಣಿಮೆ

ಗುರುಬ್ರಹ್ಮ ಗುರುವಿಷ್ಣು ಗುರುರ್ದೇವೋ ಮಹೇಶ್ವರಃ

ಗುರುಸಾಕ್ಷಾತ್ ಪರಬ್ರಹ್ಮ ತಸ್ಮೆöÊಶ್ರೀ ಗುರವೇ ನಮಃ

ಗುರುವು ಬ್ರಹ್ಮನಾಗಿದ್ದಾನೆ(ಸೃಷ್ಟಿ). ಗುರುವು ವಿ಼ಷ್ಣುವಾಗಿದ್ದಾನೆ(ಸ್ಥಿತಿ), ಗುರುವು ಮಹೇಶ್ವರನಾಗಿದ್ದಾನೆ(ಲಯ). ಅವನೇ ಸಾಕ್ಷಾತ್ ಪರಬ್ರಹ್ಮನೂ ಆಗಿದ್ದಾನೆ. ಜಗತ್ತಿನ ಈ ಮೂರು ಸ್ಥಿತಿಗಳು(ಸೃಷ್ಟಿ, ಸ್ಥಿತಿ, ಲಯ) ಬೇರೆಬೇರೆಯಾರೂ ಅದು ಒಂದೆಡೆ ನೆಲೆಯಾಗುತ್ತದೆ ಎಂದರೆ ಅದು “ಗುರು”ವಿನಲ್ಲಿ. ಅಂತಹ ಗುರುವಿಗೆ ನನ್ನ ನಮಸ್ಕಾರಗಳು. ಎಂಬುದು ಮೇಲಿನ ಶ್ಲೋಕದ ಅರ್ಥವಾಗಿದೆ.

ಭೂಮಂಡಲದ ಎಲ್ಲಾ ಪ್ರಾಣಿಗಳಂತೆ ಮನುಷ್ಯನೂ ಪ್ರಾಣಿಯೇ ಆದರೂ ತನ್ನ ಯೋಚನಾ ಶಕ್ತಿಯಿಂದ ಅವನು ಉಳಿದೆಲ್ಲ ಪ್ರಾಣಿಗಳಿಗಿಂತ ವಿಭಿನ್ನ. ಹಾಗಾಗಿ ಅವನ ಜೀವನವೂ ವಿಭಿನ್ನ ರೀತಿಯಲ್ಲ್ಲಿರುತ್ತದೆ. ಆ ಜೀವನವು ಉತ್ತಮವಾಗಿ, ಸಂಸ್ಕಾರಯುತವಾಗಿ ರೂಪುಗೊಳ್ಳಬೇಕಾದರೆ ಅದಕ್ಕೆ ಉತ್ತಮ ಗುರುವಿನ ಅವಶ್ಯಕತೆ ಇರುತ್ತದೆ. ಎಲ್ಲಾ ಮಹಾನ್ ವ್ಯಕ್ತಿಗಳ ಜೀವನವನ್ನು ಗಮನಿಸಿದರೆ ಅವರ ಜೀವನದ ಹಂತಗಳಲ್ಲಿ ಆ ಗುರುವಿನ ಶಕ್ತಿಯು ಮಾರ್ಗದರ್ಶಕರಾಗಿ ಅವರ ಜೊತೆಗಿರುವುದು ಕಂಡುಬರುತ್ತದೆ. ಒಬ್ಬ ಸಾಮಾನ್ಯ ಮನುಷ್ಯ ಮಹಾನ್ ವ್ಯಕ್ತಿ ಆಗುವುದಕ್ಕೆ ಆ ಗುರುವಿನ ಕೃಪೆ ಅತ್ಯಗತ್ಯವಾಗಿರುತ್ತದೆ.

ನಮ್ಮ ಜೀವನದಲ್ಲಿ ಎರಡು ರೀತಿಯ “ಹುಟ್ಟು” ಇರುತ್ತದೆ. ಒಂದು ‘ತಾಯಿಯ ಗರ್ಭದಿಂದ’ ಹಾಗೂ ಇನ್ನೊಂದು ‘ಗುರುವಿನಿಂದ’. ತಾಯಿ ಜೀವವನ್ನು ನೀಡಿದರೆ, ಜೀವನವನ್ನು ನೀಡುವವರೇ “ಗುರು”. ಹೀಗೆ ಪ್ರತಿಕ್ಷಣ ಜೊತೆಗಿದ್ದು ಜೀವನದ ಅರ್ಥ, ಗುರಿ, ಆ ಗುರಿ ಸಾಧಿಸಲು ಇರುವ ಮಾರ್ಗವನ್ನು ತೋರಿಸಿ, ಅಜ್ಞಾನವನ್ನು ನಾಶ ಮಾಡಿ ಜ್ಞಾನದ ಬೆಳಕನ್ನು ತೋರಿ ಮಾರ್ಗದರ್ಶನ ನೀಡುವ ಆ ಗುರುವೆಂಬ ಶಕ್ತಿಗೆ ಹೃದಯ ಪೂರ್ವಕವಾಗಿ ಕೃತಜ್ಞತೆ ಸಲ್ಲಿಸುವ ಸುಂದರವಾದ, ಹೃದಯಸ್ಪರ್ಶಿ ದಿನವೇ “ಗುರು ಪೂರ್ಣಿಮೆ”.

ಪ್ರತಿ ವರ್ಷವೂ ಗುರು ಪೂರ್ಣಿಮೆಯ ದಿನದಂದು ಕುಂಚೇಬೈಲಿನ ಧ್ಯಾನಮಂದಿರದಲ್ಲಿ ಎಲ್ಲರೂ ಒಟ್ಟಿಗೇ ಸೇರಿ ಜೀವನವನ್ನು ಸುಂದರವಾಗಿಸಿದ ಗುರುವಿಗೆ ಕೃತಜ್ಞತೆಯನ್ನು ಅರ್ಪಿಸಿ ಅವರ ಆಶೀರ್ವಾದ, ಪ್ರೀತಿ ಹಾಗೂ ಕೃಪೆಗೆ ಪಾತ್ರರಾಗುವ ವಿಶೇಷ ದಿನವಾಗಿದೆ. ಇದರ ಪ್ರಯುಕ್ತ “ಶ್ರೀ ಗುರು ದತ್ತಾತ್ರೇಯ ಮೂಲಮಂತ್ರ ಹೋಮ” ವನ್ನು ನೆರವೇರಿಸಲಾಗುತ್ತದೆ.

5. ಮಹಾಯಜ್ಞ ಸಂಗಮ - 108 ಯಜ್ಞಗಳ ಸಂಗಮ

ಭಗವoತನಿoದ ಸೃಷ್ಟಿಯಾದ ಮಾನವ ಶರೀರಕ್ಕೆ ಆತ್ಮದ ಪ್ರವೇಶದ ಕ್ಷಣದಿಂದಲೇ ಆಧ್ಯಾತ್ಮಿಕ, ಆದಿದೈವಿಕ, ಆದಿಭೌತಿಕವೆಂಬ ತಾಪತ್ರಯಗಳನ್ನು ಹೊತ್ತೇ ಇರುತ್ತಾನೆ. ಅಷ್ಟೇ ಅಲ್ಲದೇ ಪೂರ್ವ ಜನ್ಮದ ಸುಕೃತದ ಲೇಶವೂ ಹಾಗೂ ದುಷ್ಕೃತದ ಫಲವಾದ ಕರ್ಮದ ಕ್ಲೇಶವೂ ಮಾನವನನ್ನು ನೆರಳನೋಪಾದಿಯಲ್ಲಿ ಹಿಂಬಾಲಿಸುತ್ತಿರುತ್ತದೆ. ಈ ಕರ್ಮಫಲಗಳನ್ನು ಕೇವಲ ದೇವತಾರಾಧನೆ ಹಾಗೂ ಯಜ್ಞದಿಂದಲೇ ಕಡಿಮೆ ಮಾಡಿಕೊಂಡು ಆರೋಗ್ಯಪೂರ್ಣವಾದ ನೆಮ್ಮದಿಯ ಜೀವನ ನಡೆಸಲು ಸಾಧ್ಯವೆನ್ನುವುದು ನಮ್ಮ ಪೂರ್ವಿಕರ ನಂಬಿಕೆಯೂ, ಶಾಸ್ತಿçÃಯವೂ ಆಗಿದೆ. ಅಂತೆಯೇ “ಅಗಿಮುಖಾವೈ ದೇವಾಃ” ಎಂಬAತೆ ವಿಧಿವತ್ತಾದ ಶಾಸ್ತೊçÃಕ್ತವಾದ ಯಜ್ಷ ಕರ್ಮದಿಂದ ಮಾತ್ರ ದೇವತೇಷ್ಟವಾದ ತತ್ತತ್ ದ್ರವ್ಯಗಳು ಅಗ್ನಿಮುಖೇನ ತತ್ತನ್ಮಂತ್ರ ಪೂರ್ವಕವಾಗಿ ಅಗ್ನಿಗೆ ಅರ್ಪಿಸಿದಲ್ಲಿ ಅಗ್ನಿಯ ಪತ್ನಿಯಾದ ಸ್ವಾಹಾ ದೇವಿಯ ಮುಖಾಂತರ ಆಯಾ ದೇವತೆಗಳಿಗೆ ತಲುಪಿ ಸಂಕಲ್ಪಪೂರ್ವಕವಾದ ಇಷ್ಟಾರ್ಥಗಳು ನೆರವೇರುತ್ತದೆಂಬುದು ಅದಮ್ಯ ನಂಬಿಕೆ.

ವೈಜ್ಞಾನಿಕವಾಗಿಯೂ ಆಕಾಶದಲ್ಲಿರುವ ಓಜೋನ್ ಪದರದ ಅಭಿವೃದ್ಧಿಗೆ ಯಜ್ಞವು ಸಹಕಾರಿ ಎಂದು ಸಾಬೀತಾಗಿದೆ. ಸಾಮಾನ್ಯವಾಗಿ ಒಂದು ಅಥವಾ ಎರಡು ಯಜ್ಞಗಳನ್ನು ಒಂದೇ ಬಾರಿಗೆ ನೆರವೇರಿಸುವುದು ವಾಡಿಕೆ.ಆದರೆ ಕುಂಚೇಬೈಲಿನ ಧ್ಯಾನಮಂದಿರದಲ್ಲಿ ಒಂದೇ ಸ್ಥಳದಲ್ಲಿ 54 ಅಗ್ನಿಕುಂಡಗಳಲ್ಲಿ ಸುಮಾರು ೮೦ ಜನ ಋತ್ವಿಜರು ಪ್ರತ್ಯೇಕ ದೇವತೆಗಳನ್ನು ಉದ್ದೇಶಿಸಿ ೧೦೮ ಹೋಮ ಮಾಡಿರುವುದು ಅತಿ ಅಪರೂಪದ ಕಾರ್ಯಕ್ರಮವಾಗಿತ್ತು.

ಲೋಕಕಲ್ಯಾಣಾರ್ಥವಾಗಿ, ಶೃಂಗೇರಿ ಕ್ಷೇತ್ರದ ಕಲ್ಯಾಣಕ್ಕಾಗಿ ನಡೆದ ಈ ಹೋಮವು ಮಲೆನಾಡಿನಲ್ಲಿಯೇ ಮೊದಲ ಬಾರಿಗೆ ನಡೆದ ಕಾರ್ಯಕ್ರಮವಾಗಿದೆ.

6. 1800 ಜನರಿಂದ ಭಗವದ್ಗೀತಾ ಪಾರಾಯಣ

ಗೀತಾಧ್ಯಯನ ಶೀಲಸ್ಯ ಪ್ರಾಣಾಯಾಮ ಪರಿಸ್ಯ ಚ

ನೈವ ಸಂತಿ ಹಿ ಪಾಪಾನಿ ಪೂರ್ವಜನ್ಮ ಕೃತಾನಿ ಚ

“ಗೀತೆಯನ್ನು ಸತತವಾಗಿ ಅಧ್ಯಯನ ಮಾಡುವವನಿಗೆ ಹಾಗೂ ಪ್ರಾಣಾಯಾಮವನ್ನು ಮಾಡುತ್ತಿರುವವನಿಗೆ ಪೂರ್ವ ಜನ್ಮದಲ್ಲಿ ಮಾಡಿದ ಪಾಪಗಳು ನಾಶವಾಗುತ್ತದೆ. ಹಾಗೂ ಈ ಜನ್ಮದಲ್ಲಿನ ಯಾವ ಪಾಪಗಳೂ ಅಂಟುವುದಿಲ್ಲ.” ಎಂಬುದು ಈ ಶ್ಲೋಕದ ಅರ್ಥವಾಗಿದೆ.

“ಭಗವದ್ಗೀತೆ”ಯು ಅತ್ಯಂತ ಪವಿತ್ರ ಗ್ರಂಥಗಳಲ್ಲಿ ಒಂದು.ಇದು ಶ್ರೀಕೃಷ್ಣನ ಮುಖವಾಣಿ. “ನನ್ನ ಧರ್ಮ”ಏನು ಎನ್ನುವುದು ಕೃಷ್ಣಾರ್ಜುನರ ಸಂವಾದದ ರೂಪದಲ್ಲಿದೆ. ಗೀತೆ ಎನ್ನುವುದು ಕೇವಲ ಕೃಷ್ಣಾರ್ಜುನರ ಸಂವಾದ ಮಾತ್ರವಲ್ಲ. ಅದು ೨ ಶಕ್ತಿಗಳ ಸಮ್ಮಿಲನ. ಕೃಷ್ಣ ಎಂದರೆ- “ಪ್ರೇರಕ ಶಕ್ತಿ”, ಅರ್ಜುನ ಎಂದರೆ-“ಕ್ರಿಯಾಶಕ್ತಿ”. ಎಲ್ಲಿ ಈ ೨ ಶಕ್ತಿಗಳು ಒಂದಾಗಿರುತ್ತವೆಯೋ ಅಲ್ಲಿ ಗೆಲುವು ಎನ್ನುವುದು ನಿಶ್ಚಿತ. ಕರ್ಮ, ಜ್ಞಾನ, ಯೋಗ ಭಕ್ತಿ ಇವು ನಮ್ಮನ್ನು ಭಗವಂತನೆಡೆಗೆ ಕೊಂಡೊಯ್ಯುವ ಮಾರ್ಗಗಳು ಎಂದು ಇದು ತಿಳಿಸಿದೆ.

ನಮ್ಮ ಇಡೀ ಜೀವನದ ಎಲ್ಲಾ ಸಮಸ್ಯೆಗಳಿಗೆ, ಗೊಂದಲಗಳಿಗೆ ಪರಿಹಾರ ಈ ಭಗವದ್ಗೀತೆಯಲ್ಲಿ ಸಿಗುವಂತದ್ದು.ಇದು ನಾವು ನೋಡುವ ಜೀವನದ ದೃಷ್ಟಿಕೋನವನ್ನೇ ಬದಲಾಯಿಸುತ್ತದೆ. ಇದರಲ್ಲಿ ಪ್ರಕೃತಿ ಮತ್ತು ನಮ್ಮ ನಡುವಿನ ಸಂಬAಧ ಹೇಗಿರಬೇಕು ಎನ್ನುವುದನ್ನೂ ಕೂಡ ಒಳಗೊಂಡಿದೆ.

ಸುಮಾರು ಒಂದು ವರ್ಷಗಳ ಕಾಲ ಈ ಭಗವದ್ಗೀತೆಯನ್ನು ಅನೇಕರಿಗೆ ಹೇಳಿಕೊಟ್ಟು , ಅದರ ಸಾರಾಂಶವನ್ನು ಸರಳವಾಗಿ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ತಿಳಿಸಿ ಒಂದು ವರ್ಷದ ನಂತರ ಎಲ್ಲರೂ ಒಂದೆಡೆ ಕುಳಿತು ೧೮ ಅಧ್ಯಾಯದ ಪಾರಾಯಣ ಮಾಡಿರುತ್ತಾರೆ. ಇದೊಂದು ಅದ್ಭುತ ಕಾರ್ಯಕ್ರಮವಾಗಿ ಮೂಡಿಬಂದಿದ್ದಲ್ಲದೇ ಮನೆ ಮನೆಯಲ್ಲೂ ಇದರ ಪಠಣ, ಮುಖ್ಯವಾಗಿ ಮಕ್ಕಳಿಗೆ ಭಗವದ್ಗೀತೆ ಪಠಣ ಮಾಡುವುದಕ್ಕೆ ಉತ್ತಮ ಪ್ರೇರಣೆ ದೊರೆಯಿತು. ಲೋಕಕಲ್ಯಾಣಾರ್ಥವಾಗಿ ನಡೆದ ಈ ಕಾರ್ಯಕ್ರಮದಲ್ಲಿ “ಭಗವದ್ಗೀತಾ ಪಾರಾಯಣ ಮತ್ತು ಭಗವದ್ಗೀತಾ ಹೋಮ”ವು ಅತ್ಯಂತ ಯಶಸ್ವಿಯಾಗಿ ನೆರವೇರಿರುತ್ತದೆ.

7. ಧ್ಯಾನಮಂದಿರದಲ್ಲಿ ಲಕ್ಷ್ಮಿ ಪೂಜೆ

ಲಕ್ಷ್ಮಿ ಪೂಜೆಯು ದೀಪಾವಳಿಯ ಮೂರನೇ ದಿನದಂದು ಲಕ್ಷ್ಮಿ ದೇವಿಯನ್ನು ಪೂಜಿಸುವ ದಿನವಾಗಿದೆ.ಲಕ್ಷ್ಮಿ ದೇವಿಯು ಸಂಪತ್ತು, ಸಮೃದ್ಧಿ ಮತ್ತು ಸಂತೋಷವನ್ನು ಪ್ರತಿನಿಧಿಸುತ್ತಾಳೆ.

ಜ್ಞಾನಜ್ಯೋತಿ ಮಂದಿರದಲ್ಲಿ ಲಕ್ಷ್ಮಿ ಪೂಜೆಯನ್ನು ಸoಭ್ರಮದಿoದ ಆಚರಿಸಲಾಗುತ್ತದೆ.

8. ಲಲಿತ ಸಹಸ್ರನಾಮ ಹಾಗೂ ವಿಷ್ಣು ಸಹಸ್ರನಾಮ ಪಾರಾಯಣ

“ಸಹಸ್ರನಾಮ”ಕ್ಕೆ ನಮ್ಮ ಧಾರ್ಮಿಕ ಪದ್ಧತಿಯಲ್ಲಿ ವಿಶೇಷವಾದ ಮಹತ್ವವಿದೆ. ಇದರ ಪಠಣ ಮಾಡುವುದರಿಂದ ಮನಸ್ಸು ಶುದ್ಧಿಯಾಗುತ್ತದೆ. ಅನೇಕ ಸಹಸ್ರನಾಮಗಳು ಅಸ್ತಿತ್ವದಲ್ಲಿದ್ದು ಅದರಲ್ಲಿ ಮುಖ್ಯವಾಗಿ ಲಲಿತಾ ಸಹಸ್ರನಾಮ ‘ಲಲಿತಾ’ ಅಂದರೆ ದೇವಿ. ಈ ಲಲಿತಾ ಸಹಸ್ರನಾಮವು ದೇವಿಯ ೧೦೦೦ ಹೆಸರುಗಳು ಹಾಗೂ ಅದರ ಗುಪ್ತ ಅರ್ಥಗಳಿಂದ ಇದು ಸಮೃದ್ಧವಾಗಿದೆ. ಹಾಗೂ ವಿಷ್ಣು ಸಹಸ್ರನಾಮದಲ್ಲಿ ವಿಷ್ಣುವಿನ ೧೦೦೦ ಹೆಸರುಗಳನ್ನು ವಿವರಿಸಲಾಗಿದೆ.

ಕುಂಚೇಬೈಲಿನ ಧ್ಯಾನಮಂದಿರದಲ್ಲಿ ಲೋಕಕಲ್ಯಾಣಾರ್ಥವಾಗಿ ನೂರಾರು ಜನರು ಒಂದೆಡೆ ಕುಳಿತು ಒಂದು ದಿನ “ಸಾಮೂಹಿಕ ಲಲಿತಾ ಸಹಸ್ರನಾಮ ಪಾರಾಯಣ ಹಾಗೂ ಹೋಮ” ಹಾಗೂ ಇನ್ನೊಂದು ದಿನ “ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ ಹಾಗೂ ಹೋಮವನ್ನು ನೆರವೇರಿಸಿರುತ್ತಾರೆ. ಇದರಿಂದ ಧನಾತ್ಮಕ ಶಕ್ತಿಯ ಜೊತೆಗೆ ದೈವೀಕ ಶಕ್ತಿಯು ವೃದ್ಧಿಯಾಗುತ್ತದೆ.

9. ಸುಮಾರು 360 ಜೋಡಿಗಳಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ ಕಾರ್ಯಕ್ರಮ

ಪೂಜೆ ಎಂದರೆ ಕೇವಲ ಹೊರಗಡೆಯ ವಸ್ತುಗಳನ್ನು ಅರ್ಪಣೆ ಮಾಡುವುದಷ್ಟೇ ಆಗಿರದೇ ಭಗವಂತನ ಜೊತೆ ಎಲ್ಲರೂ ಭಾವನಾತ್ಮಕವಾಗಿ ಹಾಗೂ ಭಕ್ತಿಪೂರ್ವಕವಾಗಿ ಭಗವಂತನ ಸಾನಿಧ್ಯವನ್ನು ಅನುಭವ ಮಾಡಿಕೊಳ್ಳುವುದಾಗಿರುತ್ತದೆ. ”ಸಾಮೂಹಿಕ ಸತ್ಯ ನಾರಾಯಣ ಪೂಜೆ”ಯಲ್ಲಿ ಭಾಗವಹಿಸುವುದರಿಂದ ನಮ್ಮ ಆಂತರಿಕ ಶಕ್ತಿ ವೃದ್ಧಿಸುವುದಲ್ಲದೇ ಎಲ್ಲರೂ ಒಟ್ಟಾಗಿ ಒಮ್ಮನಸ್ಸಿನಿಂದ ಭಗವಂತನ ಆರಾಧನೆಗೈಯುವುದರಿಂದ ಭಗವಂತನ ವಿಶೇಷ ಕೃಪಾಕಟಾಕ್ಷಕ್ಕೆ ಪಾತ್ರರಾಗಲು ಸಾಧ್ಯವಾಗುತ್ತದೆ.

ಜ್ಞಾನಜ್ಯೋತಿ ಮಂದಿರದ ಮೊದಲ ವರ್ಷದ ವಸಂತ ಮಹೋತ್ಸವದ ಸುಸಂದರ್ಭದಲ್ಲಿ ಲೋಕಕಲ್ಯಾಣಾರ್ಥವಾಗಿ ನಡೆದ ಈ “ ಸಾಮೂಹಿಕ ಸತ್ಯ ನಾರಾಯಣ ಪೂಜೆ” ಯಲ್ಲಿ ಸುಮಾರು ೩೬೦ ಜೋಡಿಗಳು ಕುಳಿತು ಪೂಜೆಯನ್ನು ನೆರವೇರಿಸಿರುತ್ತಾರೆ.

10. ಸಾರ್ವಜನಿಕ ಗಣೇಶೋತ್ಸವ

ಹಬ್ಬಗಳಲ್ಲಿ ಗಣೇಶ ಹಬ್ಬವು ಅತ್ಯಂತ ವಿಜೃಂಭಣೆಯಿAದ, ಉತ್ಸಾಹದಿಂದ ಆಚರಿಸುವ ಹಬ್ಬವಾಗಿದೆ. ಕುಂಚೇಬೈಲಿನ ಧ್ಯಾನಮಂದಿರದಲ್ಲಿ 2012, 2018, 2019 ರಲ್ಲಿ ಸಾರ್ವಜನಿಕವಾಗಿ ಗಣೇಶೋತ್ಸವ ಕಾರ್ಯಕ್ರಮವನ್ನು ಅದ್ಧೂರಿಯಾಗಿ ವಿಜೃಂಭಣೆಯಿAದ ಆಚರಿಸಲಾಗಿತ್ತು. ಹಾಗೂ ಈ ಸಂದರ್ಭದಲ್ಲಿ ಅನೇಕ ಕಾರ್ಯಕ್ರಮಗಳನ್ನು, ವಿವಿಧ ಗ್ರಾಮೀಣ ಆಟೋಟ ಸ್ಫರ್ಧೆಗಳಾದ ಕೆಸರುಗದ್ದೆ ಓಟ, ಹಗ್ಗ ಜಗ್ಗಾಟ ಹಾಗೂ ಇನ್ನೂ ಅನೇಕ ಒಳಾಂಗಣ ಆಟೋಟ ಸ್ಫರ್ಧೆಗಳನ್ನು ಏರ್ಪಡಿಸಲಾಗಿತ್ತು. ಜನರು ಅತ್ಯಂತ ಉತ್ಸಾಹದಿಂದ ಇವುಗಳಲ್ಲಿ ಪಾಲ್ಗೊಂಡಿರುತ್ತಾರೆ.

11. ಸೌಂದರ್ಯ ಲಹರಿ ಹವನ ಮತ್ತು ಸ್ತೋತ್ರ ನಮಸ್ಕಾರ

“ಸೌಂದರ್ಯ ಲಹರಿ” ಶಂಕರಾಚಾರ್ಯರು ರಚಿಸಿದ ೧೦೦ ಶ್ಲೋಕಗಳ ಸಂಯೋಜನೆಯಾಗಿದೆ. ಮತ್ತು ಇದು ಲಲಿತಾ ದೇವಿಗೆ ಸಮರ್ಪಿತವಾದ ಶ್ಲೋಕಗಳಾಗಿವೆ. ಹಾಗೂ ಪ್ರತಿಯೊಂದು ಶ್ಲೋಕವೂ ತನ್ನದೇ ಆದ ಸ್ವತಂತ್ರ ‘ಯಂತ್ರ’ವನ್ನು ಹೊಂದಿದೆ. ಅಂದರೆ ಪ್ರತಿಯೊಂದು ಶ್ಲೋಕವೂ ತನ್ನದೇ ಆದ ಶಕ್ತಿಯನ್ನು ಹೊಂದಿರುತ್ತದೆ.

ಜ್ಞಾನಜ್ಯೋತಿ ಯೋಗಕೇಂದ್ರದ ವತಿಯಿಂದ ಒಂದು ವರ್ಷಗಳ ಕಾಲ ಈ ಸೌಂದರ್ಯ ಲಹರಿಯನ್ನು ಅನೇಕರಿಗೆ ಪಠಣ ಮಾಡಲು ಹೇಳಿಕೊಟ್ಟು ಹಾಗೂ ಅದರ ಅರ್ಥವನ್ನು ತಿಳಿಸಿ ನಂತರ ಒಂದು ವರ್ಷದ ನಂತರ ಎಲ್ಲರೂ ಒಟ್ಟಾಗಿ ಕುಂಚೇಬೈಲಿನ ಧ್ಯಾನ ಮಂದಿರದಲ್ಲಿ “ಸೌಂದರ್ಯ ಲಹರಿ ಹವನ ಮತ್ತು ಸ್ತೋತ್ರ ನಮಸ್ಕಾರ” ಕಾರ್ಯಕ್ರಮವು ಅತ್ಯಂತ ಅದ್ಭುತವಾಗಿ ನೆರವೇರಿತು. ವಿಶೇಷವಾಗಿ ಇಲ್ಲಿ ೧೦೦ ಜೋಡಿಗಳು ೧೦೦ ಶ್ಲೋಕದ ‘ಯಂತ್ರ’ವನ್ನು ಇಟ್ಟು ಅದಕ್ಕೆ ಪೂಜೆ ಸಲ್ಲಿಸಿರುತ್ತಾರೆ ನಂತರ ಒಂದೊAದು ಶ್ಲೋಕವನ್ನು ಪಠಿಸಿ ಪ್ರದಕ್ಷಿಣೆ ಮಾಡಿ ನಮಸ್ಕರಿಸಿ ಹೀಗೆ ೧೦೦ ಪ್ರದಕ್ಷಿಣೆ ನಮಸ್ಕಾರ ಮಾಡಿರುತ್ತಾರೆ. ನಂತರ ಕೊನೆಯಲ್ಲಿ ಪೂರ್ಣಾಹುತಿಗೆ ಒಂದೊAದೇ ಶ್ಲೋಕವನ್ನು ಎಲ್ಲರೂ ಪಠಿಸಿ, ಪ್ರತಿಯೊಂದು ಜೋಡಿಯೂ(ಒಂದು ಶ್ಲೋಕಕ್ಕೆ ಒಂದು ಜೋಡಿಯಂತೆ) ಸ್ವತಃ ಅವರೇ ಆಹುತಿಯನ್ನು ಹೋಮಕ್ಕೆ ಸಮರ್ಪಣೆ ಮಾಡಿ ಸಾರ್ಥಕತೆಯನ್ನು ಪಡೆದಿರುತ್ತಾರೆ.

12. ರುದ್ರ ಏಕಾದಶನಿ ಹೋಮ

ಆಧ್ಯಾತ್ಮಿಕ ಸಾಧನ ಮಾರ್ಗದಲ್ಲಿ ವೇದ ಮಂತ್ರಗಳ ನಿತ್ಯಪಾರಾಯಣಕ್ಕೆ ಒಂದು ವಿಶಿಷ್ಟ ಸ್ಥಾನವಿದೆ. ಮಂತ್ರಗಳನ್ನು ಸ್ವರಕ್ರಮವನ್ನು ಅನುಸರಿಸಿ ಉಚ್ಛರಿಸಬೇಕು. ಇದರಿಂದ ಮನಸ್ಸು ಉದಾತ್ತಭಾವಕ್ಕೇರುವುದು ಎಂದು ಶಾಸ್ತçಗಳು ಹೇಳುತ್ತವೆ. ಅದರಲ್ಲಿ ಶಿವನಿಗೆ ಸಂಬAಧಿಸಿದ “ರುದ್ರ”ವೂ ಒಂದು.

ರುದ್ರನು ಲಯ ಹಾಗೂ ಶುದ್ಧೀಕರಣದ ಸಂಕೇತನಾಗಿದ್ದಾನೆ. ವಿಶೇಷವಾಗಿ ಪುರುಷರು ರುದ್ರದ ಅಭ್ಯಾಸ ಹಾಗೂ ಪಠಣ ಮಾಡುವುದರಿಂದ ಅದ್ಭುತ ಶಕ್ತಿಯನ್ನು ಸಂಪಾದಿಸಬಹುದಾಗಿದೆ.

ಕುಂಚೇಬೈಲಿನ ಧ್ಯಾನಮಂದಿರದಲ್ಲಿ ಲೋಕಕಲ್ಯಾಣಾರ್ಥವಾಗಿ ನಡೆದ “ರುದ್ರ ಏಕಾದಶನಿ ಹೋಮ”ವು ಅತ್ಯಂತ ಸಮರ್ಪಕವಾಗಿ ನೆರವೇರಿತು.

ಸಾಂಸ್ಕೃತಿಕ ಹಾಗೂ ಕ್ರೀಡಾ ಕಾರ್ಯಕ್ರಮಗಳು

  • “ದಾಸವಾಣಿ ಕಾರ್ಯಕ್ರಮ”

    2019ರಲ್ಲಿ ನಡೆದ 108 ಹೋಮಗಳ ಮಹಾಯಜ್ಞ ಸಂಗಮ ಕಾರ್ಯಕ್ರಮದ ಶುಭಸಂದರ್ಭದಲ್ಲಿ ವಿದ್ವಾನ್ ಮೈಸೂರು ರಾಮಚಂದ್ರಾಚಾರ್ ಇವರಿಂದ ಹಲವು ದಾಸಕೀರ್ತನೆಗಳ ಹಾಡುಗಾರಿಕೆಯು ಜನರನ್ನು ಗಾನಲೋಕದಲ್ಲಿ ಮುಳುಗುವಂತೆ ರಮಣೀಯವಾಗಿ ಮೂಡಿಬಂದಿರುತ್ತದೆ.

    2021ರಲ್ಲಿ ನಡೆದ “ಹೃದಯ ಸಂಗಮ” ಕಾರ್ಯಕ್ರಮದ ಪ್ರಯುಕ್ತ ಸಂಗೀತ ವಿದ್ಯಾನಿಧಿ ಡಾ. ವಿದ್ಯಾಭೂಷಣ, ಬೆಂಗಳೂರು ಇವರಿಂದ ದಾಸ ಕೀರ್ತನೆಗಳ ಹಾಡುಗಾರಿಕೆಯು ಜನರ ಹೃದಯ ಮುಟ್ಟುವಂತೆ ಮೂಡಿಬಂದಿರುತ್ತದೆ.

  • “ಹರಿಕಥೆ”

    “ಸುಂದರ ಕಾಂಡ”
    2021ರಲ್ಲಿ ನಡೆದ “ಹೃದಯ ಸಂಗಮ” ಕಾರ್ಯಕ್ರಮದ ಪ್ರಯುಕ್ತ ಕೀರ್ತನಾ ಚತುರ ಶಿರಸಿ ಶ್ರೀ ನಾರಾಯಣ ದಾಸರು ಇವರಿಂದ ಸುಂದರ ಕಾಂಡ ಹರಿಕಥೆ ಕಾರ್ಯಕ್ರಮವು ಅದ್ಭುತವಾಗಿ ಮೂಡಿಬಂದಿರುತ್ತದೆ.

    “ಮಹಿಷಾಸುರ ಮರ್ದಿನಿ” ಹರಿಕಥೆ
    2022ರಲ್ಲಿ ನಡೆದ “ಹೃದಯ ಸಂಗಮ” ಕಾರ್ಯಕ್ರಮದ ಪ್ರಯುಕ್ತ ಕೀರ್ತನಾ ಚತುರ ಶಿರಸಿ ಶ್ರೀ ನಾರಾಯಣ ದಾಸರು ಇವರಿಂದ ಮಹಿಷಾಸುರ ಮರ್ದಿನಿ ಹರಿಕಥೆ ಕಾರ್ಯಕ್ರಮವು ಅದ್ಭುತವಾಗಿ ಮೂಡಿಬಂದಿರುತ್ತದೆ.

  • “ಜಾನಪದ ಶೈಲಿಯ ಮುಖವಾಡ ರಚನೆ ಕಾರ್ಯಾಗಾರ”

    2021ರಲ್ಲಿ ನಡೆದ “ಹೃದಯ ಸಂಗಮ” ಕಾರ್ಯಕ್ರಮದ ಪ್ರಯುಕ್ತ ವಿಶೇಷವಾದ ಕಾರ್ಯಾಗಾರದ ಆಯೋಜನೆ ಮಾಡಲಾಗಿತ್ತು. ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ವೆಂಕಿ ಪಲಿಮಾರ್, ಟರ‍್ರಾಕೋಟ ಕಲಾವಿದರು, ಪಲಿಮಾರು ಇವರು ಈ ಕಾರ್ಯಾಗಾರವನ್ನು ಯಶಸ್ವಿಯಾಗಿ ನಡೆಸಿಕೊಟ್ಟಿರುತ್ತಾರೆ.

  • “ಯಕ್ಷಗಾನ”

    “ಮಹಿಷಮರ್ದಿನಿ”
    2017ರಲ್ಲಿ ನಡೆದ ಜ್ಞಾನಜ್ಯೋತಿ ಮಂದಿರದ ಉದ್ಘಾಟನೆಯ ಸಂದರ್ಭದಲ್ಲಿ ಹಳುವಳ್ಳಿಯ ಶ್ರೀ ಕುಮಾರ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ದ ಮಹಿಳೆಯರು ಹಾಗೂ ಮಕ್ಕಳಿಂದ ಮಹಿಷಮರ್ದಿನಿ ಪ್ರಸಂಗದ ಯಕ್ಷಗಾನವು ವೈಭವವಾಗಿ ಮೂಡಿಬಂದಿತು.

    “ಶಿವ ಪಂಚಾಕ್ಷರಿ ಮಹಿಮೆ”
    2017ರಲ್ಲಿ ನಡೆದ ಜ್ಞಾನಜ್ಯೋತಿ ಮಂದಿರದ ಉದ್ಘಾಟನೆಯ ಸಂದರ್ಭದಲ್ಲಿ ಆಯ್ದ ಕಲಾವಿದರುಗಳಿಂದ ಶಿವ ಪಂಚಾಕ್ಷರಿ ಮಹಿಮೆ ಯಕ್ಷಗಾನವು ಸೊಗಸಾಗಿ ಮೂಡಿಬಂದಿರುತ್ತದೆ.

    “ಗುರುದಕ್ಷಿಣೆ”
    2021ರಲ್ಲಿ ನಡೆದ “ಹೃದಯ ಸಂಗಮ” ಕಾರ್ಯಕ್ರಮದ ಪ್ರಯುಕ್ತ ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಗುರುದಕ್ಷಿಣೆ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮವು ಸೊಗಸಾಗಿ ಮೂಡಿಬಂದಿರುತ್ತದೆ.

    “ಗೀತೋಪದೇಶ”
    2022ರಲ್ಲಿ ನಡೆದ “ಹೃದಯ ಸಂಗಮ” ಕಾರ್ಯಕ್ರಮದ ಪ್ರಯುಕ್ತ ಪ್ರಸಿದ್ಧ ಕಲಾವಿದರ ಉಪಸ್ಥಿತಿಯಲ್ಲಿ ಗೀತೋಪದೇಶ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮವು ಸೊಗಸಾಗಿ ಮೂಡಿಬಂದಿರುತ್ತದೆ.

  • “ಭರತನಾಟ್ಯ” ಕಾರ್ಯಕ್ರಮ

    2022ರಲ್ಲಿ ನಡೆದ “ಹೃದಯ ಸಂಗಮ” ಕಾರ್ಯಕ್ರಮದ ಪ್ರಯುಕ್ತ ನಾಟ್ಯಾಚಾರ್ಯ ವಿದ್ವಾನ್ ಜನಾರ್ದನ ಭಟ್ ವೃಂದ ನಾಟ್ಯ ತರಂಗ ಟ್ರಸ್ಟ್, ಸಾಗರ ಇವರಿಂದ “ಭರತನಾಟ್ಯ” ಕಾರ್ಯಕ್ರಮವು ಅಮೋಘವಾಗಿ ಮೂಡಿಬಂದಿತು.

  • “ಭಜನ್ ತರಂಗ”

    2022ರಲ್ಲಿ ನಡೆದ “ಹೃದಯ ಸಂಗಮ” ಕಾರ್ಯಕ್ರಮದ ಪ್ರಯುಕ್ತ ವಿದುಷಿ ನಂದಿನಿ.ಪಿ ರಾವ್ ಪೂನಾ ಮತ್ತು ತಂಡದವರಿAದ “ಭಜನ್ ತರಂಗ” ಕಾರ್ಯಕ್ರಮವು ಸುಂದರವಾಗಿ ಮೂಡಿಬಂದಿರುತ್ತದೆ.

  • “ಕೃಷ್ಣವೇಷ ಸ್ಫರ್ಧೆ”

    2022ರಲ್ಲಿ ನಡೆದ “ಹೃದಯ ಸಂಗಮ” ಕಾರ್ಯಕ್ರಮದ ಪ್ರಯುಕ್ತ ೫ರಿಂದ ೧೦ ವರ್ಷದ ಒಳಗಿನ ಮಕ್ಕಳಿಗೆ ಕೃಷ್ಣವೇಷ ಸ್ಫರ್ಧೆಯನ್ನು ಆಯೋಜಿಸಲಾಗಿತ್ತು. ಆ ಪುಟ್ಟ, ಮುದ್ದು ಮಕ್ಕಳು ಜನರ ಗಮನವನ್ನು ಸೆಳೆದರು.

  • “ಭಕ್ತಿ ಸಂಗೀತ” ಕಾರ್ಯಕ್ರಮ

    2017ರಲ್ಲಿ ಜ್ಞಾನಜ್ಯೋತಿ ಮಂದಿರದ ಲೋಕಾರ್ಪಣೆಯ ಸಂದರ್ಭದಲ್ಲಿ ಹೆಸರಾಂತ ಗಾಯಕರಾದ ಶ್ರೀ ಪುತ್ತೂರು ನರಸಿಂಹ ನಾಯಕ್ ಇವರಿಂದ ಭಕ್ತಿಗೀತೆಗಳ ಕಾರ್ಯಕ್ರಮವು ಸುಂದರವಾಗಿ ಮೂಡಿಬಂದಿರುತ್ತದೆ.

  • “ಕಬಡ್ಡಿ ಪಂದ್ಯಾವಳಿ”

    ನಮ್ಮ ದೇಶೀ ಕ್ರೀಡೆಯಾದ ಕಬಡ್ಡಿಯನ್ನು ಉತ್ತೇಜಿಸುವ ಸಲುವಾಗಿ ಜ್ಞಾನಜ್ಯೋತಿ ಯೋಗಕೇಂದ್ರದ ವತಿಯಿಂದ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿಯನ್ನು ಆಯೋಜನೆ ಮಾಡಲಾಗಿತ್ತು.

ಹಸಿರು ಉಸಿರು ಕಾರ್ಯಕ್ರಮ

“ಪ್ರಕೃತಿ” ಎನ್ನುವುದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಅದಿಲ್ಲದೇ ನಮ್ಮ ಜೀವನವನ್ನು ಕಲ್ಪನೆ ಮಾಡುವುದೂ ಅಸಾಧ್ಯ. ಅಂತಹ ಪ್ರಕೃತಿಯನ್ನು ಸಂರಕ್ಷಣೆ ಮಾಡುವುದು ಎಲ್ಲರ ಕರ್ತವ್ಯವಾಗಿದೆ. “ಹಸಿರು ಉಸಿರು” ಕಾರ್ಯಕ್ರಮವು ಈ ಪ್ರಕೃತಿ ಸಂಪತ್ತನ್ನು ಸಂರಕ್ಷಿಸುವ ಸಲುವಾಗಿ ಮಾಡಿದ ಕಾರ್ಯಕ್ರಮವಾಗಿತ್ತು. ಈ ಕಾರ್ಯಕ್ರಮದ ಮೂಲಕ ಅನೇಕರಿಗೆ ಅವರ ಮನೆಗೇ ತೆರಳಿ ಉಚಿತವಾಗಿ ಕಲ್ಪವೃಕ್ಷವಾದ ತೆಂಗಿನ ಸಸಿಗಳನ್ನು ನೀಡಿರುತ್ತಾರೆ. ಇದರಿಂದಾಗಿ ಅವರು ಪಡೆದ ಸಸಿಗಳ ಮೇಲೆ ವಿಶೇಷ ಕಾಳಜಿಯಿಂದ ಮುತುವರ್ಜಿ ವಹಿಸಿ ನೋಡಿಕೊಳ್ಳುತ್ತಾರೆ. ಹಾಗೇ ಇಂದಿನ ಯುವ ಜನತೆ ಹಾಗೂ ಮಕ್ಕಳು ಹೇಳಿದ್ದನ್ನು ಕಲಿಯುವುದಕ್ಕಿಂತ ನೋಡಿ ಕಲಿತು ಅಳವಡಿಸಿಕೊಳ್ಳುವುದೇ ಹೆಚ್ಚು. ಹಾಗಾಗಿ “ಗಿಡವನ್ನು ನೆಟ್ಟು ಬೆಳೆಸು” ಎಂದು ಹೇಳುವುದಕ್ಕಿಂತ ನಾವೇ ನೆಟ್ಟು ಅದನ್ನು ಪೋಷಿಸಿದಾಗ ಅದನ್ನು ನೋಡಿ ಅವರು ಅದನ್ನು ಅನುಸರಿಸುವ ಪ್ರಮಾಣ ಜಾಸ್ತಿ ಇರುತ್ತದೆ. ಹೀಗೆ ಅವರಲ್ಲೂ ಪ್ರಕೃತಿ ರಕ್ಷಣೆಯ ಬಗ್ಗೆ ಅರಿವು ಮೂಡಿಸಿದಂತಾಗುತ್ತದೆ.

ಪಾದಯಾತ್ರೆ

“ಪಾದಯಾತ್ರೆ” ಹೆಸರೇ ಸೂಚಿಸುವಂತೆ ಯಾತ್ರೆಗೆ ನಡೆದುಕೊಂಡು ಹೋಗಿ ದೇವರನ್ನು ಕಾಣುವುದು. ದೇವರ ಸನ್ನಿಧಾನಕ್ಕೆ ನಡೆದೇ ಹೋಗಿ ಅಲ್ಲಿ ದರ್ಶನ ಮಾಡುವುದು ವಿಶೇಷವಾದ ಅನುಭವವನ್ನು ನೀಡುತ್ತದೆ. ಪಾದಯಾತ್ರೆಯಿಂದ ಆರೋಗ್ಯ ವೃದ್ಧಿಯಾಗುವುದಲ್ಲದೇ, ವ್ಯಕ್ತಿಗಳ ನಡುವಿನ ಬಾಂಧವ್ಯ-ಸಾಮರಸ್ಯ ಹೆಚ್ಚಾಗುತ್ತದೆ. ಅತಿ ಹೆಚ್ಚಿನ ಕಾಲ ಪ್ರಕೃತಿಯ ಮಧ್ಯೆ ಕಳೆಯುವುದರಿಂದ ಪ್ರಕೃತಿಯ ಜೊತೆಗಿನ ಸಂಬAಧ ಉತ್ತಮವಾಗುತ್ತದೆ.

ಜ್ಞಾನ ಜ್ಯೋತಿ ಯೋಗಕೇಂದ್ರದ ವತಿಯಿಂದ ಶೃಂಗೇರಿಯಿAದ - ಕಿಗ್ಗಾ ಗೆ ಒಂದು ಬಾರಿ ಹಾಗೂ ಹೊರನಾಡಿನ ರಥೋತ್ಸವದ ಸಂದರ್ಭದಲ್ಲಿ ಶೃಂಗೇರಿಯಿAದ - ಹೊರನಾಡಿಗೆ ೨ ಬಾರಿ ಪಾದಯಾತ್ರೆಯನ್ನು ಕೈಗೊಂಡು ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು. ಇದರಲ್ಲಿ ಸುಮಾರು ೫೦ ಜನ ಧ್ಯಾನಿಗಳು ಭಾಗವಹಿಸಿರುತ್ತಾರೆ.

ಮಂತ್ರಾಲಯದಲ್ಲಿ ಸೇವೆ

ಪ್ರಸಿದ್ಧ ರಾಯರ ಕ್ಷೇತ್ರ ಮಂತ್ರಾಲಯದಲ್ಲಿ ಪ್ರತಿವರ್ಷವೂ ಆರಾಧನಾ ಮಹೋತ್ಸವವು ಅದ್ಧೂರಿಯಾಗಿ ನಡೆಯುತ್ತದೆ. ಲಕ್ಷಾಂತರ ಭಕ್ತರ ಪಾಲಿಗೆ ಕಲ್ಪತರು ಆಗಿ ಅನುಗ್ರಹಿಸುವ ರಾಯರ ಬೃಂದಾವನ ಇರುವ ಸ್ಥಳ ಇದಾಗಿದೆ.

ಜ್ಞಾನಜ್ಯೋತಿ ಯೋಗಕೇಂದ್ರದಿoದ ಈ ಆರಾಧನಾ ಮಹೋತ್ಸವದ ಸಂದರ್ಭದಲ್ಲಿ ಅನೇಕ ಬಾರಿ ಮಂತ್ರಾಲಯಕ್ಕೆ ತೆರಳಿ ಅಲ್ಲಿ ಸೇವೆಯನ್ನು ಮಾಡಿ ಕೃತಾರ್ಥರಾಗಿರುತ್ತಾರೆ.

ಪಾನಕ ವಿತರಣಾ ಸೇವೆ

ನಾವು ಸೇವೆ ಮಾಡಬೇಕೆನ್ನುವ ಭಾವನೆ ಇದ್ದರೆ ಅವಕಾಶಗಳು ತಾನಾಗಿಯೇ ಸೃಷ್ಟಿಯಾಗುತ್ತವೆ. ಶೃಂಗೇರಿ ಶರನ್ನವರಾತ್ರಿಯು ೯ ದಿನಗಳ ಕಾಲ ಅತ್ಯಂತ ವಿಜೃಂಭಣೆಯಿAದ ನಡೆಯುವ ಕಾರ್ಯಕ್ರಮಗಳಲ್ಲಿ ಒಂದು. ಶರನ್ನವರಾತ್ರಿಯ ಕೊನೆಯ ದಿನದ ರಥೋತ್ಸವವು ಅದ್ಧೂರಿಯಾಗಿ ನಡೆಯುತ್ತದೆ. ಆ ದಿನ ಬಿಸಿಲಲ್ಲಿ ಸುಸ್ತಾದ ಭಕ್ತಾದಿಗಳಿಗೆ ಜ್ಞಾನಜ್ಯೋತಿ ಯೋಗಕೇಂದ್ರದ ವತಿಯಿಂದ ಉಚಿತವಾಗಿ ಪಾನಕ ವಿತರಣಾ ಸೇವೆಯನ್ನು ಮಾಡಲಾಯಿತು.

Some Photo Clicks of Guruji

ಜ್ಞಾನಜ್ಯೋತಿ ಯೋಗಕೇಂದ್ರದ ವತಿಯಿಂದ ಕೈಗೊಂಡ ಪ್ರವಾಸಗಳು

ಮನುಷ್ಯ ತನ್ನ ಜೀವನದಲ್ಲಿ ನೋಡಿ, ಕೇಳಿ, ಓದಿ ಕಲಿತ ವಿಷಯಗಳಿಗಂತ ಅನುಭವಗಳ ಮೂಲಕ ಕಲಿತ ವಿಷಯಗಳನ್ನು ಹೆಚ್ಚು ನೆನಪಿನಲ್ಲಿ ಇಟ್ಟುಕೊಳ್ಳುತ್ತಾನೆ. ಏಕೆಂದರೆ ‘ಪ್ರಾಯೋಗಿಕ ಜ್ಞಾನ’ವು ‘ಸೈದ್ಧಾಂತಿಕ ಜ್ಞಾನ’ಕ್ಕಿಂತ ಅತ್ಯಂತ ಪರಿಣಾಮಕಾರಿಯಾಗಿರುತ್ತದೆ. ಹಾಗಾಗಿ ಪ್ರವಾಸ ಎನ್ನುವುದು ಜೀವನದಲ್ಲಿ ಅನೇಕ ಅನುಭವಗಳನ್ನು ಸೃಷ್ಟಿ ಮಾಡಿ ಕೊಡುತ್ತದೆ. ಹಾಗೂ ಈ ಪ್ರವಾಸಗಳು ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರುವುದಲ್ಲದೇ ನಮ್ಮನ್ನು ಚೈತನ್ಯಯುತವಾಗಿ, ಕ್ರಿಯಾಶೀಲವಾಗಿಡುವುದಕ್ಕೆ ಪ್ರೇರಣೆಯನ್ನು ನೀಡುತ್ತವೆ. ಹಾಗೂ ಪ್ರವಾಸದ ಮೂಲಕ ನಾವು ಸಾಕಷ್ಟು ವಿಷಯಗಳನ್ನು ಕಲಿಯಬಹುದು.

ಜ್ಞಾನಜ್ಯೋತಿ ಯೋಗಕೇಂದ್ರದ ವತಿಯಿಂದ ಹಲವಾರು ಪ್ರವಾಸಗಳನ್ನು ಕೈಗೊಂಡು ಅದರ ಮೂಲಕ ಅದ್ಭುತವಾದ ಅನುಭವಗಳು, ಜ್ಞಾನವನ್ನು ಪಡೆದುಕೊಂಡಿರುತ್ತಾರೆ.

ಇದರಲ್ಲಿ ಹಲವಾರು ಪುಣ್ಯಕ್ಷೇತ್ರಗಳು, ವಿದೇಶಿ ಪ್ರವಾಸಗಳು, ಪ್ರಾಕೃತಿಕವಾಗಿ ಸುಂದರವಾಗಿರುವ ಪ್ರದೇಶಗಳು ಸೇರಿವೆ.

ಶೃಂಗೇರಿ – ಕಾಶ್ಮೀರ್ ಗೆ ಕಾರ್‌ನಲ್ಲಿ ರೋಡ್‌ಟ್ರಿಪ್

ಕಾಶಿ- ಅಯೋಧ್ಯಾ- ಪ್ರಯಾಗ್-ಗಯಾ

ವಿಯೆಟ್ನಾಂ (Vietnam)

ಒರಿಸ್ಸಾ – ಕಲ್ಕತ್ತಾ

For Any Query

Location

Jnanajyothi Yogakendra , Kunchebylu, Ginikal Sringeri Taluk, Chikkamagaluru District , Karnataka State. PIN - 577139

Phone

+91 6363027736

Email

jnanajyothiyogakendra@gmail.com